
ದೆಹಲಿಯಲ್ಲಿ ಮೋದಿ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಪ್ರಭಾವ ಇರುವ ಕನ್ನಡಿಗ ಎಂದರೆ ಅದು ಆರ್‌ಎಸ್‌ಎಸ್ ಸಹ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ. ಮೋದಿ ಇರಲಿ ಅಮಿತ್ ಶಾ ಇರಲಿ ಯಾವುದೇ ಕ್ಲಿಷ್ಟವಿಷಯದ ಬಗ್ಗೆ ಸಂಘದ ಸಲಹೆ ಬೇಕೆಂದರೆ ಮೋಹನ್ ಭಾಗವತ್ ನಂತರ ದತ್ತಾತ್ರೇಯ ಹೊಸಬಾಳೆ ಅವರಿಗೆ ಫೋನಾಯಿಸುತ್ತಾರೆ. ಶಿವಮೊಗ್ಗ ಜಿಲ್ಲೆಯ ಸೊರಬದವರಾದ ದತ್ತಾತ್ರೇಯ ಹೊಸಬಾಳೆ ತುರ್ತು ಪರಿಸ್ಥಿತಿ ದಿನಗಳಲ್ಲಿಯೇ ಸಂಘದ ಪ್ರಚಾರಕರಾದವರು. ಹೊಸಬಾಳೆ ಬಗ್ಗೆ ಬಿಜೆಪಿ ಉನ್ನತ ವಲಯದಲ್ಲಿ ಅತ್ಯಂತ ಹೆಚ್ಚಿನ ಗೌರವವಿದೆ. ಚಡ್ಡಿಧಾರಿ ಸಂಘವನ್ನು ಪ್ಯಾಂಟ್ ಯುಗಕ್ಕೆ ತಂದವರಲ್ಲಿ ಹೊಸಬಾಳೆ ಕೂಡ ಒಬ್ಬರು ಎಂದು ಹೇಳಲಾಗುತ್ತಿದೆ. ಕುತೂಹಲವೆಂದರೆ ಉಗ್ರಪ್ಪ, ಪಿ.ಜಿ.ಆರ್. ಸಿಂಧ್ಯಾ ಮತ್ತು ದತ್ತಾತ್ರೇಯ ಹೊಸಬಾಳೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ಜೊತೆಗಾರರಾಗಿ ಕೆಲಸ ಮಾಡಿದವರಂತೆ.
(ಪ್ರಶಾಂತ್ ನಾತೂ ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.