ಮತ್ತೆ ಸರ್ಕಾರದ ವಿರುದ್ಧ ಟ್ವಿಟರ್'ನಲ್ಲಿ ಆರೋಪಿಸಿದ 'ಹರಾಮಿ' ಹೇಳಿಕೆಯ ಸಚಿವ

By Suvarna Web DeskFirst Published Jan 16, 2018, 1:24 PM IST
Highlights

ಎಂ.ಬಿ.ಪಾಟೀಲ್ ಅವರು ' ವಿನೋದ್ ಪಾಳೇಕರ್ ಅವರ ಉದ್ಧಟತನದ ಹೇಳಿಕೆಗೆ ನಮ್ಮ ನಾಡ ರಕ್ಷಣೆ ಪಾಠವನ್ನು ನಿಮ್ಮಿಂದ ಕಲಿಯಬೇಕಾಗಿಲ್ಲ. ನಿಮ್ಮಂತ ಸಾವಿರ ಜನ ಬಂದರೂ ಕೂಡ ನಮ್ಮನ್ನು ಬಗ್ಗಿಸಲು ಸಾಧ್ಯವಿಲ್ಲ' ಎಂದು ಟ್ವೀಟ್ ಮಾಡಿದ್ದರು.

ಪಣಜಿ(ಜ.16): ಕನ್ನಡಿಗರನ್ನು ಹರಾಮಿಗಳೆಂದು ಜರಿದು, ಒಂದು ತೊಟ್ಟು ಮಹದಾಯಿ ನೀರು ಬಿಡುವುದಿಲ್ಲ ಎಂದು ಜರಿದಿದ್ದ  ಗೋವಾ ಜಲ ಸಂಪನ್ಮೂಲ ಸಚಿವ ಪಾಳೇಕರ್, ರಾಜ್ಯ ಸಚಿವ ಎಂ.ಬಿ. ಪಾಟೀಲ್ ಅವರ ಟ್ವೀಟ್'ಗೆ ಮತ್ತೆ ರಿಟ್ವೀಟ್ ಮಾಡಿ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ.

'ಕರ್ನಾಟಕ ಸರ್ಕಾರ ಮಹದಾಯಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲ ಸಾಕ್ಷಿಗಳಿಗೆ ನಿತ್ಯ 50 ಸಾವಿರ ರೂ. ವೆಚ್ಚ ಮಾಡುತ್ತಿದೆ. ಆದರೆ ನಾವು ನಮ್ಮ ಸಾಕ್ಷಿಗಳಿಗೆ ಒಂದು ನಯಾ ಪೈಸೆ ಖರ್ಚು ಮಾಡುತ್ತಿಲ್ಲ' . ಕರ್ನಾಟಕದ ಸಾಕ್ಷಿ ಎ.ಕೆ.ಗೋಸೈನ್ ಅವರಿಗೆ ದಿನಕ್ಕೆ 50 ಸಾವಿರ ರೂ ನೀಡಲಾಗುತ್ತಿದೆ. ನ್ಯಾಯಾಧಿಕರಣದ ಮುಂದೆ ಒಪ್ಪಿದ್ದ ಕರ್ನಾಟಕ ಪರ ಸಾಕ್ಷಿ ಗೋಸೈನ್. ವರದಿ ತಯಾರಿಸುವುದಕ್ಕೆ ಸಹ 5 ಲಕ್ಷ ರೂಪಾಯಿ ಪಡೆದಿದ್ದಾರೆ' ಎಂದು ಟ್ವಿಟರ್ ಮೂಲಕ ಗೋವಾ ಸಚಿವ ವಿನೋದ್ ಪಾಳೇಕರ್ ಆರೋಪಿಸಿದ್ದಾರೆ.

ಎಂ.ಬಿ.ಪಾಟೀಲ್ ಅವರು ' ವಿನೋದ್ ಪಾಳೇಕರ್ ಅವರ ಉದ್ಧಟತನದ ಹೇಳಿಕೆಗೆ ನಮ್ಮ ನಾಡ ರಕ್ಷಣೆ ಪಾಠವನ್ನು ನಿಮ್ಮಿಂದ ಕಲಿಯಬೇಕಾಗಿಲ್ಲ. ನಿಮ್ಮಂತ ಸಾವಿರ ಜನ ಬಂದರೂ ಕೂಡ ನಮ್ಮನ್ನು ಬಗ್ಗಿಸಲು ಸಾಧ್ಯವಿಲ್ಲ' ಎಂದು ಟ್ವೀಟ್ ಮಾಡಿದ್ದರು.

click me!