
ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಯಾವುದಾದರೂ ಪ್ರಕರಣದಲ್ಲಿ ಬಿಜೆಪಿ ಸರ್ಕಾರ ಮೇಲ್ನೋಟಕ್ಕೆ ವಿಫಲವಾಗಿರುವ ಪ್ರಕರಣ ಎಂದರೆ ಬಾಬಾ ರಾಮ್ ರಹೀಮ್ ದೋಷಿ ಎಂಬ ಕೋರ್ಟ್ ತೀರ್ಪಿನ ನಂತರ ನಡೆದ ಹಿಂಸಾಚಾರ. ರಾಜ್ಯ ಸರ್ಕಾರ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೆ ಹಿಂಸಾಚಾರ ನಡೆದಿರುವ ಬಗ್ಗೆ ಪ್ರಧಾನಿ ಮೋದಿ ತಾನೇ ನೇಮಿಸಿದ ಮುಖ್ಯಮಂತ್ರಿ ಮೇಲೆ ಭಯಂಕರ ಸಿಟ್ಟಾಗಿದ್ದು, ಕೆಲವರು ಹೇಳುತ್ತಿರುವ ಪ್ರಕಾರ ಖಟ್ಟರ್ ಮೇಲೆ ಗರಂ ಆಗಿ ಫೋನ್'ನಲ್ಲಿಯೇ ಕೂಗಾಡಿದ್ದಾರಂತೆ. ನಿಮಗೆ ಆಡಳಿತ ನಡೆಸಲು ಬರೋದಿಲ್ಲವಾದರೆ ರಾಜೀನಾಮೆ ಕೊಡಿ ಎಂದು ಝಾಡಿಸಿದ್ದಾರಂತೆ ಕೂಡ. ಅಂದ ಹಾಗೆ 2002ರಲ್ಲಿ ಗುಜರಾತ್ ದಂಗೆಗಳಾದಾಗ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಹೀಗೆಯೇ ತರಾಟೆಗೆ ತೆಗೆದುಕೊಂಡು ರಾಜಧರ್ಮದ ಬೋಧನೆ ಮಾಡಿದ್ದರು. ನರೇಂದ್ರ ಮೋದಿ ಹರಿಯಾಣ ಬಿಜೆಪಿಯ ಪ್ರಭಾರಿಯಾಗಿದ್ದಾಗ ಖಟ್ಟರ್ ಅಲ್ಲಿನ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಆಗಿದ್ದರಂತೆ. ಇಬ್ಬರೂ ಆಗ ಜೊತೆಗೂಡಿ ದಾಲ್ ಖಿಚಡಿ ಮಾಡಿಕೊಳ್ಳುತ್ತಿದ್ದರಂತೆ. ಹೀಗಾಗಿಯೇ ಮೋದಿ ಸಾಹೇಬರು ಹರಿಯಾಣದಲ್ಲಿ ಅಧಿಕಾರ ಸಿಕ್ಕಾಗ ತನ್ನಂತೆ ಮದುವೆಯಾಗದೆ ಇರುವ ಸಂಘಿ ಎನ್ನುವ ಕಾರಣಕ್ಕಾಗಿ ಖಟ್ಟರ್'ರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ್ದರು.
- ಪ್ರಶಾಂತ್ ನಾತು, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.