
ನವದೆಹಲಿ(ಜೂ.15): ಶುದ್ದ ಕುಡಿಯುವ ನೀರು ಸಿಗದೆ ದೇಶದಲ್ಲಿ ಪ್ರತಿವರ್ಷ 2 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. 60 ಕೋಟಿ ಜನರು ನೀರಿನ ಬವಣೆಯಿಂದ ಬಳಲುತ್ತಿದ್ದು, ದೇಶ ಕೆಟ್ಟ ನೀರಿನ ಬಿಕ್ಕಟ್ಟು ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ.
ಸಂಯೋಜಿತ ನೀರು ನಿರ್ವಹಣಾ ಸೂಚ್ಯಂಕ ವರದಿ ಇಂದು ಬಿಡುಗಡೆ ಮಾಡಿದ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ,ಬಿಕ್ಕಟ್ಟು ಮತ್ತಷ್ಟು ಘೋರವಾಗಲಿದೆ ಎಂದು ಎಚ್ಚರಿಸಿದ್ದಾರೆ. 2030 ರ ಹೊತ್ತಿಗೆ ದೇಶದಲ್ಲಿ ನೀರಿನ ಬೇಡಿಕೆ ಎರಡು ಬಾರಿ ಪೂರೈಕೆ ಮಾಡುವಷ್ಟು ಲಭ್ಯವಿರುವುದಾಗಿ ಊಹಿಸಲಾಗಿದ್ದು, ನೂರಾರು ದಶಲಕ್ಷ ಜನರಿಗೆ ತೀವ್ರವಾದ ನೀರಿನ ಕೊರತೆ ಎದುರಾಗಲಿದೆ. ಜಿಡಿಪಿಯಲ್ಲಿ ಶೇ.6 ರಷ್ಟ ಕೊರತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸ್ವತಂತ್ರ ಏಜೆನ್ಸಿಗಳ ಮಾಹಿತಿಯಂತೆ ಶೇ. 70 ರಷ್ಟು ನೀರು ಕಲುಷಿತವಾಗಿದ್ದು, ನೀರಿನ ಗುಣಮಟ್ಟದ ಸೂಚ್ಯಂಕದಲ್ಲಿನ 122 ರಾಷ್ಟ್ರಗಳ ಪೈಕಿ ಭಾರತ 120 ನೇ ಸ್ಥಾನದಲ್ಲಿದೆ .ಪ್ರಸಕ್ತ, 600 ಮಿಲಿಯನ್ ಭಾರತೀಯರು ತೀವ್ರ ನೀರಿನ ಬವಣೆ ಎದುರಿಸುತ್ತಿದ್ದಾರೆ . ಅಲ್ಲದೇ ಸುರಕ್ಷಿತವಾಗಿ ನೀರಿನ ಲಭ್ಯತೆ ಇಲ್ಲದಿರುವುದರಿಂದ ಪ್ರತಿ ವರ್ಷ ಸುಮಾರು ಎರಡು ಲಕ್ಷ ಜನರು ಸಾವನ್ನಪ್ಪುತ್ತಾರೆ ಎಂದು ನೀತಿ ಆಯೋಗದ ವರದಿಯಲ್ಲಿ ಹೇಳಲಾಗಿದ್ದು. ನೀರಿನ ಸಂಪನ್ಮೂಲಗಳು ಮತ್ತು ಬಳಕೆ ಬಗ್ಗೆ ಅರಿವು ಮೂಡಿಸಬೇಕಾಗದ ಅಗತ್ಯವಿದೆ ಎಂದು ಒತ್ತಿ ಹೇಳಿದೆ.
ಡಾಲ್ಬರ್ಗ್ ಅನಾಲಿಸಿಸ್, ಎಫ್ಎಒ ಮತ್ತು ಯುನಿಸೆಪ್ ನಂತರ ಸಂಸ್ಥೆಗಳ ಅಂಕಿ ಅಂಶಗಳ ಪ್ರಕಾರ 2030 ರ ಹೊತ್ತಿಗೆ ಶೇ. 40 ರಷ್ಟು ಜನರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಕಷ್ಟಸಾಧ್ಯವಾಗಲಿದೆ. 2020 ರ ಹೊತ್ತಿಗೆ ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ 21 ನಗರಗಳಲ್ಲಿ ಅಂತರ್ಜಲ ಸಮಸ್ಯೆ ಕಾಡಲಿದ್ದು, 100 ದಶಲಕ್ಷ ಜನರು ತೀವ್ರ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.