
ಶ್ರೀನಗರ[ಆ.19]: ಜಮ್ಮು ಕಾಶ್ಮೀರದ ತವೀ ನದಿಯಲ್ಲಿ ಅಚಾನಕ್ಕಾಗಿ ನೀರಿನ ಮಟ್ಟ ಹೆಚ್ಚಾಗಿದ್ದು, ನದಿಗೆ ಅಡ್ಡಲಾಗಿ ಕಟ್ಟಿದ್ದ ಇಬ್ಬರು ಬೆಸ್ತರು ಪ್ರವಾಹದಲ್ಲಿ ಸಿಲುಕಿದ್ದಾರೆ. ಹೀಗೆ ಅಪಾಯದಲ್ಲಿ ಸಿಲುಕಿದ್ದ ಈ ಇಬ್ಬರು ಮೀನುಗಾರರನ್ನು ಸತತ 30 ನಿಮಿಷಗಳ ಕಾರ್ಯಾಚರಣೆ ನಡೆಸಿ ಭಾರತೀಯ ವಾಯುಸೇನೆ ರಕ್ಷಿಸಿದೆ.
ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಇಬ್ಬರು ಮೀನುಗಾರರು ನಿರ್ಮಾಣ ಹಂತದಲ್ಲಿದ್ದ ಸೇತುವೆ ಮೇಲೆ ಹತ್ತಿ ಕುಳಿತಿದ್ದಾರೆ. ಈ ವೇಳೆ ವಾಯುಪಡೆ ಇವರ ರಕ್ಷಣೆಗೆ ಮುಂದಾಗಿದೆ. ಹೆಲಿಕಾಪ್ಟರ್ ಮೂಲಕ ಓರ್ವ ಯೋಧ ಸೇತುವೆ ಮೇಲಿಳಿದು ಇಬ್ಬರಿಗೂ ಜೀವ ರಕ್ಷಕ ಜಾಕೆಟ್ ತೊಡಿಸಿ ಮೇಲಕ್ಕೆತ್ತಿದ್ದಾರೆ.
"
ಇಬ್ಬರನ್ನೂ ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಬಳಿಕ ಮತ್ತೆ ಮರಳಿದ ವಾಯುಸೇನಾ ಹೆಲಿಕಾಪ್ಟರ್ ಸೇತುವೆ ಮೇಲಿದ್ದ ಯೋಧನನ್ನು ಕರೆದೊಯ್ದಿದೆ. ಜೀವ ಪಣಕ್ಕಿಟ್ಟು ದೇಶದ, ಇಲ್ಲಿನ ನಾಗರಿಕರ ಸೇವೆಗೆ, ರಕ್ಷಣೆಗೆ ಮುಂದಾಗುವ ನಮ್ಮ ಯೋಧರಿಗೆ ಬಿಗ್ ಸೆಲ್ಯೂಟ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.