ತಮಾಷೆ ಅಲ್ಲ... ರಟ್ಟಿನ ಬಾಕ್ಸ್ ತಲೆಗೆ ಹಾಕಿ ವಿದ್ಯಾರ್ಥಿಗಳಿಗೆ ಪರೀಕ್ಷೆ| ಮೆಕ್ಸಿಕೋದ ಟ್ಲಾಕ್ಸಾಲಾ ರಾಜ್ಯದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಕದ್ದು ನೋಡುವುದನ್ನು ತಪ್ಪಿಸಲು ಹೊಸ ಉಪಾಯ
ಮೆಕ್ಸಿಕೋ[ಸೆ.09]: ಎಷ್ಟೇ ಕಟ್ಟೆಚ್ಚರ ವಹಿಸಿದರೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಹೊಡೆಯಲು ಏನಾದರೂ ಒಂದು ಉಪಾಯ ಹುಡುಕೇ ಹುಡುಕುತ್ತಾರೆ. ಆದರೆ, ಮೆಕ್ಸಿಕೋದ ಟ್ಲಾಕ್ಸಾಲಾ ರಾಜ್ಯದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಕದ್ದು ನೋಡುವುದನ್ನು ತಪ್ಪಿಸಲು ಹೊಸ ಉಪಾಯವೊಂದನ್ನು ಹುಡುಕಿದ್ದಾರೆ.
ಇಲ್ಲಿ ವಿದ್ಯಾರ್ಥಿಗಳು ರಟ್ಟಿನ ಬಾಕ್ಸ್ ಅನ್ನು ತಲೆಗೆ ಹಾಕಿಕೊಂಡು ಪರೀಕ್ಷೆ ಬರೆಯಬೇಕು. ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ನೋಡಲು ರಟ್ಟಿನ ಬಾಕ್ಸ್‌ನಲ್ಲಿ ಸಣ್ಣದೊಂದು ಕಿಂಡಿ ಕೊರೆಯಲಾಗಿದೆ.
ಹೀಗಾಗಿ ಆಚೀಚೆ ನೋಡಿದರೂ ಏನೂ ಕಾಣುವುದಿಲ್ಲ.