ಹೂಡಿಕೆದಾರರ ಸೆಳೆಯಲು ಪಾಕ್‌ನಿಂದ ಬೆಲ್ಲಿ ಡ್ಯಾನ್ಸ್‌ ಶೋ: ಹಿಗ್ಗಾಮುಗ್ಗಾ ಟೀಕೆ

By Web DeskFirst Published Sep 9, 2019, 1:43 PM IST
Highlights

ಸೆ.4ರಿಂದ 8ರವರೆಗೆ ಅಜೆರ್‌ಬೈಜಾನ್‌ ದೇಶದ ಬಾಕುವಿನಲ್ಲಿ ಹೂಡಿಕೆದಾರರ ಸಮ್ಮೇಳನ| ಹೂಡಿಕೆದಾರರ ಸೆಳೆಯಲು ಬೆಲ್ಲಿ ಡ್ಯಾನ್ಸ್‌ ಏರ್ಪಡಿಸಿದ ಪಾಕ್‌: ಹಿಗ್ಗಾಮುಗ್ಗಾ ಟೀಕೆ| 

ನವದೆಹಲಿ[ಸೆ.09]: ತೀವ್ರ ಆರ್ಥಿಕ ಹಿಂಜರಿತದಿಂದ ನಲುಗಿರುವ ಪಾಕಿಸ್ತಾನ ಹೂಡಿಕೆ ಆಕರ್ಷಿಸಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ಸೆ.4ರಿಂದ 8ರವರೆಗೆ ಅಜೆರ್‌ಬೈಜಾನ್‌ ದೇಶದ ಬಾಕುವಿನಲ್ಲಿ ಹೂಡಿಕೆದಾರರ ಸಮ್ಮೇಳನವೊಂದನ್ನು ಪಾಕಿಸ್ತಾನ ಆಯೋಜಿಸಿತ್ತು. ಅಲ್ಲಿ ಹೂಡಿಕೆದಾರರನ್ನು ಸೆಳೆಯಲು ಬೆಲ್ಲಿ ನೃತ್ಯಗಾರ್ತಿಯರಿಂದ ಪ್ರದರ್ಶನ ಏರ್ಪಡಿಸಿತ್ತು. ಇದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

When General Doctrine Chief Economist tries to lure investors into the Pakistan Investment Promotion Conference in Baku, Azerbaijan with belly dancers.... pic.twitter.com/OUoV85wmnV

— Gul Bukhari (@GulBukhari)

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪಾಕಿಸ್ತಾನದ ಈ ಹತಾಶ ಕ್ರಮಕ್ಕೆ ಅಲ್ಲಿನ ಕೆಲ ಮಾಧ್ಯಮಗಳು, ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ.

ಭಾರತದ ವಿರುದ್ಧ ಯುದ್ಧ ಸಾರುವ ಮಾತುಗಳನ್ನು ಆಡುತ್ತಿರುವ ಪಾಕಿಸ್ತಾನದಲ್ಲಿ ಪ್ರಧಾನಮಂತ್ರಿ ಕಚೇರಿಯ ವಿದ್ಯುತ್‌ ಬಿಲ್‌ ಕಟ್ಟಲೂ ಆಗದ ದುಸ್ಥಿತಿಗೆ ತಲುಪಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ನೆರವಿಗೆ ಮೊರೆ ಇಡುತ್ತಲೇ ಬಂದಿದೆ.

click me!