‘ಸೈಯದ್ ಸಲಾವುದ್ದೀನ್ ಜಾಗತಿಕ ಉಗ್ರ’: ಮೋದಿ-ಟ್ರಂಪ್ ಭೇಟಿಗೂ ಮುನ್ನ ಮಹತ್ವದ ಘೋಷಣೆ

Published : Jun 27, 2017, 09:18 AM ISTUpdated : Apr 11, 2018, 12:49 PM IST
‘ಸೈಯದ್ ಸಲಾವುದ್ದೀನ್  ಜಾಗತಿಕ  ಉಗ್ರ’: ಮೋದಿ-ಟ್ರಂಪ್ ಭೇಟಿಗೂ ಮುನ್ನ ಮಹತ್ವದ ಘೋಷಣೆ

ಸಾರಾಂಶ

ಭಯೋತ್ಪಾದನೆ  ವಿರುದ್ಧ  ಪಾಕಿಸ್ತಾನಕ್ಕೆ ಎಚ್ಚರಿಸುತ್ತಲೇ ಬರುತ್ತಿರುವ ಅಮೆರಿಕ, ಇದೀಗ ಪಾಕ್​  ಆಸರೆ ನೀಡಿರುವ ಸೈಯದ್​ ಸಲಾವುದ್ದೀನ್​ನನ್ನು  ಜಾಗತಿಕ ಉಗ್ರ ಎಂದು ಘೋಷಿಸಿದೆ. ಈ ಮೂಲಕ ಉಗ್ರರನನ್ನು  ಮಟ್ಟ ಹಾಕುವಂತೆ  ಪರೋಕ್ಷ  ಎಚ್ಚರಿಕೆ ನೀಡಿದೆ.

ವಾಷಿಂಗ್ಟನ್(ಜೂ.27): ಭಯೋತ್ಪಾದನೆ  ವಿರುದ್ಧ  ಪಾಕಿಸ್ತಾನಕ್ಕೆ ಎಚ್ಚರಿಸುತ್ತಲೇ ಬರುತ್ತಿರುವ ಅಮೆರಿಕ, ಇದೀಗ ಪಾಕ್​  ಆಸರೆ ನೀಡಿರುವ ಸೈಯದ್​ ಸಲಾವುದ್ದೀನ್​ನನ್ನು  ಜಾಗತಿಕ ಉಗ್ರ ಎಂದು ಘೋಷಿಸಿದೆ. ಈ ಮೂಲಕ ಉಗ್ರರನನ್ನು  ಮಟ್ಟ ಹಾಕುವಂತೆ  ಪರೋಕ್ಷ  ಎಚ್ಚರಿಕೆ ನೀಡಿದೆ.

ಭಯೋತ್ಪಾದನೆಯನ್ನು  ತನ್ನ ಮಡಿಲಲ್ಲಿ ಹೊತ್ತು ಸಲಹುತ್ತಿರುವ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ  ಮತ್ತೊಮ್ಮೆ  ಭಾರೀ ಮುಖಂಗವಾಗಿದೆ .

ಪಾಕ್​​ಗೆ ಭಾರೀ ಮುಖಭಂಗ

ಇಂದು ಭಾರತ  ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ  ಡೊನಾಲ್ಡ್​ ಟ್ರಂಪ್  ಭೇಟಿಗೂ  ಮುನ್ನಾ  ಅಮೆರಿಕಾ ಸರ್ಕಾರ  ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಯ ಮುಖ್ಯಸ್ಥ  ಸೈಯದ್​ ಸಲಾವುದ್ದೀನ್​ನನ್ನು  ಜಾಗತಿಕ ಮಟ್ಟದ ಉಗ್ರ ಎಂದು ಘೋಷಿಸಿದೆ. ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ  ಗೋಪಾಲ್​ ಬಾಗ್ಲೆ  ಸುದ್ದಿಗೋಷ್ಠಿಯಲ್ಲಿ  ಈ ವಿಚಾರವನ್ನು  ಬಹಿರಂಗಪಡಿಸಿದರು.      

ಕಾಶ್ಮೀರದಲ್ಲಿ  ಜನಿಸಿ ಪಾಕ್​ನಲ್ಲಿ ಆಶ್ರಯ!: ಹೆಂಡತಿ ಮಕ್ಕಳನ್ನು  ಬಿಟ್ಟು ಉಗ್ರ ಸಂಘಟನೆ ಸೇರಿದ!   

ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆ ಮುಖ್ಯಸ್ಥ  ಸೈಯದ್​ ಸಲಾವುದ್ದೀನ್ ಜನಸಿದ್ದು  ಕಾಶ್ಮಿರದಲ್ಲಾದರೂ, ಹೆಂಡತಿ, ಮಕ್ಕಳನ್ನು  ತೊರೆದು ಈತ  ನೆಲೆಸಿರೋದು ಉಗ್ರರಿಗೆ ಆಶ್ರಯ ನೀಡುತ್ತಿರುವ  ಪಾಕಿಸ್ತಾನದಲ್ಲಿ. ಸುರಕ್ಷಿತ ಅಡಗುತಾಣದಲ್ಲಿ ಈತನಿಗೆ ಜಾಗ ಕೊಟ್ಟು ಪಾಕಿಸ್ತಾನ ಈತನನ್ನು  ಬೆಳಸುತ್ತಿದೆ. ಸ್ಲೀಪರ್​​ ಸೆಲ್​ನಲ್ಲಿ  ಕುಳಿತೇ ಭಾರತದಂತಹ ಶಾಂತಿ ಪ್ರಿಯ ರಾಷ್ಟ್ರದಲ್ಲಿ  ಅಶಾಂತಿಯ ದ್ವೇಷದ  ಬೀಜವನ್ನು  ಬಿತ್ತುತ್ತಿದ್ದಾನೆ.  

ಉಗ್ರ ಬುಹ್ರನ್ ವಾನಿಯ ಬಲಗೈ ಬಂಟ ಸೈಯದ್!: ಕಾಶ್ಮೀರದ ಅಶಾಂತಿಗೆ  ಪ್ರಮುಖ ಕಾರಣ ಸಲಾವುದ್ದೀನ್ !

ಸೈಯದ್​ ಸಲಾವುದ್ದೀನ್  ಹಿಜ್ಬುಲ್​ ಮುಜಾಹಿದ್ದಿನ್ ಸಂಘಟನೆಯ ಕಮಾಂಡರ್​ ಆಗಿದ್ದ  ಬುಹ್ರನ್  ವಾನಿಯ ಬಲಗೈ ಬಂಟ. ಅಷ್ಟೇ ಅಲ್ಲ ಕಾಶ್ಮೀರದಲ್ಲಿ ತಲೆದೂರಿರುವ ಅಶಾಂತಿಗೆ ಕಾರಣಿಕರ್ತನೇ  ಈ ಸೈಯದ್​ ಸಲಾವುದ್ದೀನ್. ಹೀಗಾಗಿಯೇ ಈತನ ಬೇಟೆಗಾಗಿ  ಗುಪ್ತಚರ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು  , ಈತನ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. 

ಒಟ್ಟಿನಲ್ಲಿ   ಪಾಕಿಸ್ತಾನಕ್ಕೆ ಮತ್ತೊಮ್ಮೆ  ಪರೋಕ್ಷ ಎಚ್ಚರಿಕೆ ನೀಡಿರುವ ಅಮೆರಿಕ ಭಯೋತ್ಪಾದನೆಯನ್ನು  ದಮನಕ್ಕೆ ಮಾಡುವಂತೆ ಎಚ್ಚರಿಕೆ  ನೀಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಕೋಳಿಗೆ ಚೀಪ್ ಆಗಿ ಮೊಟ್ಟೆ ಇಡು ಅನ್ನೋಕಾಗುತ್ತಾ?' ಮೊಟ್ಟೆಯ ದರದ ಬಗ್ಗೆ ಬಿಜೆಪಿ ಶಾಸಕನ ಪ್ರಶ್ನೆಗೆ ಶಿಕ್ಷಣ ಸಚಿವರ ಉತ್ತರ
ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ: ಕುತೂಹಲ!