
ನವದೆಹಲಿ (ಏ.19): ಕೆಲವು ತಿಂಗಳ ಹಿಂದೆ ಒಡಿಸ್ಸಾದಲ್ಲಿ ಹೆಂಡತಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿರುವ ಘಟನೆ ಜನಮಾನಸದಿಂದ ಮಾಸುವ ಮೊದಲು ಅಂತದ್ದೇ ಮನಕಲಕುವ ಘಟನೆ ಅಸ್ಸಾಂ ಮುಖ್ಯಮಂತ್ರಿ ತವರು ಕ್ಷೇತ್ರದಲ್ಲೇ ನಡೆದಿದೆ.
ವ್ಯಕ್ತಿಯೊಬ್ಬ ತನ್ನ ಸಹೋದರನ ಮೃತ ದೇಹವನ್ನು ಬೈಸಿಕಲ್ ನಲ್ಲಿ ಕೊಂಡೋಯ್ದಿರುವ ಘಟನೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಕ್ಷೇತ್ರವಾದ ಅಸ್ಸಾಂನ ಮಜೂಲಿಯಲ್ಲಿ ನಡೆದಿದೆ. ಈ ವಿಡಿಯೋ ಫೂಟೇಜ್ ಟಿವಿಯಲ್ಲಿ ಪ್ರಸಾರವಾದ ಗಂಟೆಗಳಲ್ಲೇ ಮುಖ್ಯಮಂತ್ರಿ ಸೋನೋವಾಲ್ ತನಿಖೆಗೆ ಆದೇಶಿಸಿದ್ದು, ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ನಡೆದಿದ್ದೇನು?
ರೋಗಿಯ ಕುಟುಂಬಸ್ಥರು ಲಕ್ಷ್ಮೀಪುರ ಜಿಲ್ಲೆಯಿಂದ 8 ಕಿಮೀ ದೂರದಲ್ಲಿರುವ ಬಲಿಜನ್ ಎನ್ನುವ ಹಳ್ಳಿಯಲ್ಲಿ ವಾಸವಗಿದ್ದರು. ಊರಿನ ಸಮೀಪವೇ ಇರುವ ಗರಮೂರ್ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಬರಬೇಕಾಗಿತ್ತು. ಆದರೆ ಬಲಿಜನ್ ಊರಿಗೆ ಮೋಟಾರ್ ವಾಹನಗಳು ಹೋಗುವ ರಸ್ತೆಯಿರಲಿಲ್ಲ.ಗರಂಪುರ್ ಮುಖ್ಯರಸ್ತೆಗೆ ಬಂದು ಸೇರಬೇಕಾದರೆ ಬಿದಿರಿನ ಸಂಕವನ್ನು ದಾಟಿ ಬರಬೇಕಾಗಿತ್ತು.ಹೀಗಾಗಿ ಆಸ್ಪತ್ರೆಯ ವಾಹನಕ್ಕೆ ಕಾಯದೇ ಬೈಸಿಕಲ್ ನಲ್ಲೇ ರೋಗಿಯನ್ನು ಕರೆ ತರಲು ಅವರ ಕುಟುಂಬದವರು ನಿರ್ಧರಿಸಿದರು. ದುರದೃಷ್ಟವಶಾತ್ ಆಸ್ಪತ್ರೆಗೆ ತರುವಷ್ಟರಲ್ಲೇ ರೋಗಿ ಮೃತಪಟ್ಟಿದ್ದರು. ಬೈಸಿಕಲ್ ಗೆ ಬಿಗಿಯಾಗಿ ಕಟ್ಟಿದ್ದರಿಂದ ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದಾರೆಂದು ವೈದ್ಯರು ಹೇಳಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ ಜಿ ಜಾ ಹೇಳಿದ್ದಾರೆ.
(ವರದಿ: ಇಂಡಿಯನ್ ಎಕ್ಸ್'ಪ್ರೆಸ್)
ಈ ಮನಕಲಕುವ ವಿಡಿಯೋ ಇಲ್ಲಿದೆ ನೋಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.