ತಲೆಬೋಳಿಸಿಕೊಂಡ ಸೋನು ನಿಗಂ; 10 ಲಕ್ಷ ಕೊಡೋದಿಲ್ಲವೆಂದ ಮುಸ್ಲಿಂ ಧರ್ಮಗುರು

By Suvarna Web DeskFirst Published Apr 19, 2017, 1:20 PM IST
Highlights

ಇಸ್ಲಾಂ ಧರ್ಮಗುರುವೊಬ್ಬರ 10 ಲಕ್ಷ ರೂ ಚಾಲೆಂಜ್ ಸ್ವೀಕರಿಸಿ ಗಾಯಕ ಸೋನು ನಿಗಂ ತಲೆಬೋಳಿಸಿಕೊಂಡಿರುವ ಸುದ್ದಿ ವೈರಲ್ ಆಗುತ್ತಿದೆ. ತಾನು ತಲೆ ಬೋಳಿಸಿಕೊಂಡಿದ್ದು, ಸಯದ್ ಶಾ ಖ್ವಾದೇರಿ ಅವರಿಂದ 10 ಲಕ್ಷ ರೂಪಾಯಿಯ ನಿರೀಕ್ಷೆಯಲ್ಲಿದ್ದೇನೆ ಎಂದು ಸೋನು ನಿಗಂ ಹೇಳಿದ್ದಾರೆ. ಆದರೆ, ಪಶ್ಚಿಮ ಬಂಗಾಳದ ಧರ್ಮಗರು ಸಯದ್ ಶಾ ಖ್ವಾದೇರಿ ತಾನು 10 ಲಕ್ಷ ರೂ ಕೊಡಬೇಕೆಂದರೆ ಇನ್ನೂ ಎರಡು ಷರತ್ತುಗಳು ಪೂರ್ಣಗೊಳ್ಳಬೇಕು ಎಂದಿದ್ದಾರೆ.

ನವದೆಹಲಿ(ಏ. 19): ಇಸ್ಲಾಂ ಧರ್ಮಗುರುವೊಬ್ಬರ 10 ಲಕ್ಷ ರೂ ಚಾಲೆಂಜ್ ಸ್ವೀಕರಿಸಿ ಗಾಯಕ ಸೋನು ನಿಗಂ ತಲೆಬೋಳಿಸಿಕೊಂಡಿರುವ ಸುದ್ದಿ ವೈರಲ್ ಆಗುತ್ತಿದೆ. ತಾನು ತಲೆ ಬೋಳಿಸಿಕೊಂಡಿದ್ದು, ಸಯದ್ ಶಾ ಖ್ವಾದೇರಿ ಅವರಿಂದ 10 ಲಕ್ಷ ರೂಪಾಯಿಯ ನಿರೀಕ್ಷೆಯಲ್ಲಿದ್ದೇನೆ ಎಂದು ಸೋನು ನಿಗಂ ಹೇಳಿದ್ದಾರೆ. ಆದರೆ, ಪಶ್ಚಿಮ ಬಂಗಾಳದ ಧರ್ಮಗರು ಸಯದ್ ಶಾ ಖ್ವಾದೇರಿ ತಾನು 10 ಲಕ್ಷ ರೂ ಕೊಡಬೇಕೆಂದರೆ ಇನ್ನೂ ಎರಡು ಷರತ್ತುಗಳು ಪೂರ್ಣಗೊಳ್ಳಬೇಕು ಎಂದಿದ್ದಾರೆ.

ಏನು ಆ 3 ಷರತ್ತುಗಳು?
* ಸೋನು ನಿಗಂ ಅವರ ತಲೆ ಬೋಳಿಸಬೇಕು
* ಹಳೆಯ ಚಪ್ಪಲಿ ಹಾರ ಹಾಕಬೇಕು
* ಇಡೀ ದೇಶದ ಸಂಚಾರ ಮಾಡಬೇಕು

ಈಗ ಮೊದಲ ಷರತ್ತಷ್ಟೇ ಪೂರೈಸಿದೆ. ಇನ್ನೂ ಎರಡು ಷರತ್ತುಗಳನ್ನು ಪೂರ್ಣಗೊಳಿಸಿದರೆ ಮಾತ್ರ 10 ಲಕ್ಷ ನೀಡುತ್ತೇನೆ ಎಂದು ಮೌಲ್ವಿ ಸಾಹೇಬರು ಸ್ಪಷ್ಟಪಡಿಸಿದ್ದಾರೆ.

ಏನಿದು ವಿವಾದ?
ಮಸೀದಿಗಳಲ್ಲಿ ಮುಂಜಾನೆಯೇ ಧ್ವನಿವರ್ಧಕದ ಮೂಲಕ ಆಜಾನ್ ಹೊರಡಿಸುವ ಪದ್ಧತಿ ಇದೆ. ಇದು ಮಸೀದಿಗೆ ಪ್ರಾರ್ಥನೆಗೆ ಬರಲು ಮುಸ್ಲಿಂ ಧರ್ಮಾನುಯಾಯಿಗಳಿಗೆ ನೀಡುವ ಸೂಚನೆ. ಆದರೆ, ಧರ್ಮವನ್ನು ಅನುಸರಿಸದ ವ್ಯಕ್ತಿಗಳಿಗೆ ಧ್ವನಿವರ್ಧಕದ ಮೂಲಕ ಬಲವಂತವಾಗಿ ಸೂಚನೆ ನೀಡುವುದು ಸರಿಯಲ್ಲ ಎಂಬರ್ಥದಲ್ಲಿ ಸೋನು ನಿಗಂ ಅವರು ಟ್ವೀಟ್ ಮಾಡಿದ್ದರು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವಿಪರೀತ ಪರ-ವಿರೋಧದ ಚರ್ಚೆಯಾಗಿದೆ.

ಕ್ಲೆರಿಕ್ ಸಯದ್ ಶಾ ಖ್ವಾದೇರಿ ಅವರೂ ಕೂಡ ಸೋನು ನಿಗಂ ಹೇಳಿಕೆಯನ್ನು ಖಂಡಿಸಿ, ಅವರ ತಲೆಬೋಳಿಸಿದವರಿಗೆ 10 ಲಕ್ಷ ಬಹುಮಾನ ಕೊಡುತ್ತೇನೆ ಎಂದು ಘೋಷಿಸಿದ್ದರು.

click me!