ಈ ಪ್ರಖ್ಯಾತ ದೇವಸ್ಥಾನಕ್ಕೆ ಬ್ರಾಹ್ಮಣೇತರ ಅರ್ಚಕ ನೇಮಕ

By Web DeskFirst Published Jul 31, 2018, 10:57 AM IST
Highlights

ಇದೇ ಮೊಟ್ಟ ಮೊದಲ ಬಾರಿಗೆ ಮಧುರೈ ದೇವಸ್ಥಾನಕ್ಕೆ ಬ್ರಾಹ್ಮಣೇತರ ಅರ್ಚಕರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಜಾತಿ ಪದ್ಧತಿಯನ್ನು ಕಿತ್ತೊಗೆಯಲಾಗಿದೆ. 

ಚೆನ್ನೈ (ಜು. 31): ತಮಿಳುನಾಡಿನ ಮದುರೈ ದೇವಸ್ಥಾನವೊಂದರಲ್ಲಿ ಇದೇ ಮೊದಲ ಬಾರಿಗೆ ಬ್ರಾಹ್ಮಣೇತರ ವ್ಯಕ್ತಿಯನ್ನು ಅರ್ಚಕನನ್ನಾಗಿ ನೇಮಿಸಲಾಗಿದೆ.

ಈ ಮೂಲಕ ಅರ್ಚಕ ಹುದ್ದೆಗೆ ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗಿದ್ದ ಜಾತಿ ಬೇಲಿಯನ್ನು ಇದೇ ಮೊದಲಿಗೆ ಕಿತ್ತೊಗೆದಂತಾಗಿದೆ. 1970 ರಲ್ಲಿಯೇ ಕರುಣಾನಿಧಿ ಅವರು, ಇತರ ಸಮುದಾಯದ ಸದಸ್ಯರು ಸಹ ಅರ್ಚಕರಾಗಬೇಕು ಎಂಬ ಆದೇಶವೊಂದನ್ನು ಹೊರಡಿಸಿದರು. ಆದರೆ, ಸುಪ್ರೀಂ ಕೋರ್ಟ್ ಇದನ್ನು ತಡೆಹಿಡಿದಿತ್ತು. ಆದರೆ, 2006 ರಲ್ಲಿ ಮತ್ತೊಮ್ಮೆ ಇದೇ ಆದೇಶವನ್ನು ಕರುಣಾನಿಧಿ ಅವರು ಹೊರಡಿಸಿದರು. 

ಆಗ ಈ ನಿರ್ಧಾರವನ್ನು ಸುಪ್ರೀಂ ಬೆಂಬಲಿಸಿತು. ಇದರ ಪರಿಣಾಮವಾಗಿ ಅಂದಿನಿಂದಲೇ ೨೪ ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸೇರಿ ಒಟ್ಟು 206 ಮಂದಿ ಬ್ರಾಹ್ಮಣೇತರರು ತಮಿಳುನಾಡಿನ ವಿವಿಧ ದೇವಸ್ಥಾನಗಳಲ್ಲಿ ಅರ್ಚಕರಾಗಲು ಅಗತ್ಯವಿರುವ ವಿದ್ಯೆಯನ್ನು ಕಲಿತರು. ಇದರಲ್ಲಿ ಮರೈಸ್ವಾಮಿ(ಹೆಸರು ಬದಲಿಸಲಾಗಿದೆ) ಎಂಬುವರನ್ನು ಮದುರೈನ ಥಳಕುಳಂ ಅಯ್ಯಪ್ಪನ್ ದೇವಸ್ಥಾನಕ್ಕೆ ಅರ್ಚಕರನ್ನಾಗಿ ನೇಮಿಸಲಾಗಿದೆ

click me!