ಆದಾಯ ತೆರಿಗೆ ಸಲ್ಲಿಸುವವರ ಪ್ರಮಾಣ ದ್ವಿಗುಣ

By Web DeskFirst Published Jul 31, 2018, 9:36 AM IST
Highlights

ಆದಾಯ ತೆರಿಗೆ ಸಲ್ಲಿಸುವವರ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ತೆರಿಗೆ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವಾರು ದಾರಿಗಳನ್ನು ಹುಡುಕುತ್ತಿರುವಾಗಲೇ ಪ್ರಸಕ್ತ ವರ್ಷದಲ್ಲಿ ಆದಾಯ ತೆರಿಗೆ
ರಿಟರ್ನ್ ಸಲ್ಲಿಸುವವರ ಪ್ರಮಾಣ ಎರಡು ಪಟ್ಟು  ಹೆಚ್ಚಾಗಿದೆ. 

ನವದೆಹಲಿ (ಜು. 31): ತೆರಿಗೆ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವಾರು ದಾರಿಗಳನ್ನು ಹುಡುಕುತ್ತಿರುವಾಗಲೇ ಪ್ರಸಕ್ತ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ.

ಈ ವರ್ಷ ಕಳೆದ ಗುರುವಾರದವರೆಗೆ (ಜು.29) 3.07 ಕೋಟಿ ತೆರಿಗೆ ಇ-ರಿಟರ್ನ್ಗಳು ಸಲ್ಲಿಕೆಯಾಗಿವೆ. 2017 ರ ಜು. 26 ರವರೆಗೆ ಸಲ್ಲಿಕೆಯಾಗಿದ್ದ 1.7 ಕೋಟಿ ರಿಟರ್ನ್‌ಗಳಿಗೆ ಹೋಲಿಸಿದರೆ ಇದು ಶೇ.82 ರಷ್ಟು ಅಧಿಕ. ಇದೇ ವೇಳೆ, ರೀಫಂಡ್ ಕೋರಿಕೆ ವಿಲೇವಾರಿಯಲ್ಲೂ ಶೇ.81 ರಷ್ಟು ಏರಿಕೆ ಕಂಡುಬಂದಿದೆ. ಕಳೆದ ಗುರುವಾರದವರೆಗೆ 77,700 ಕೋಟಿ ರು. ಹಣವನ್ನು ರೀಫಂಡ್ ರೂಪದಲ್ಲಿ ಮರಳಿಸಲಾಗಿದೆ.  

click me!