2016ರಲ್ಲಿ ಉಗ್ರರ ದಾಳಿಗೆ 68 ಯೋಧರು ಹುತಾತ್ಮ..!

By Suvarna Web DeskFirst Published Mar 17, 2017, 4:46 PM IST
Highlights

ಲೋಕಸಭೆಯ ಅಧಿವೇಶನದಲ್ಲಿ ಮಾತನಾಡಿದ ರಕ್ಷಣಾ ಸಚಿವಾಲಯದ ಸಹಾಯಕ ಸಚಿವ ಸುಭಾಷ್ ಭಾಮ್ರೆ, ‘2017ರ ಮೂರು ತಿಂಗಳ ಅವಧಿಯಲ್ಲಿ ಪಾಕ್ ಸೇನೆ 30 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

ನವದೆಹಲಿ(ಮಾ.17): ಕಳೆದ ವರ್ಷ ಭಾರತೀಯ ಸೇನಾ ನೆಲೆಗಳ ಮೇಲಿನ 15 ಬಾರಿಯ ಉಗ್ರರ ದಾಳಿಯಲ್ಲಿ ಒಟ್ಟು 68 ಮಂದಿ ಯೋಧರು ಹುತಾತ್ಮರಾಗಿದ್ದಾರೆ ಎಂದು ಕೇಂದ್ರ ಸಚಿವ ಸುಭಾಷ್ ಭಾಮ್ರೆ ತಿಳಿಸಿದ್ದಾರೆ.

2016ರಲ್ಲಿ ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಸೇನೆ 449 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದೂ ಅವರು ಹೇಳಿದ್ದಾರೆ. ಲೋಕಸಭೆಯ ಅಧಿವೇಶನದಲ್ಲಿ ಮಾತನಾಡಿದ ರಕ್ಷಣಾ ಸಚಿವಾಲಯದ ಸಹಾಯಕ ಸಚಿವ ಸುಭಾಷ್ ಭಾಮ್ರೆ, ‘2017ರ ಮೂರು ತಿಂಗಳ ಅವಧಿಯಲ್ಲಿ ಪಾಕ್ ಸೇನೆ 30 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.

ಅಲ್ಲದೆ, 2014ರಲ್ಲಿ 10, 2015ರಲ್ಲಿ 11 ಮತ್ತು 2016ರಲ್ಲಿ 15 ಬಾರಿ ಭಾರತದ ಸೇನಾ ನೆಲೆಗಳ ಮೇಲಿನ ಉಗ್ರರ ದಾಳಿಯಲ್ಲಿ ಕ್ರಮವಾಗಿ 38, 67 ಮತ್ತು 68 ಯೋಧರು ವೀರ ಮರಣವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಸಂತ್ರಸ್ಥ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಲಾಗಿದೆ ಎಂದು ಭಾಮ್ರೆ ತಿಳಿಸಿದ್ದಾರೆ.

ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೇರಿದರೂ ಯೋಧರ ಹುತಾತ್ಮರಾಗುವ ಸಂಖ್ಯೆ ಮಾತ್ರ ಇಳಿಮುಖವಾಗಿಲ್ಲ.

click me!