ಪಾಕ್ ಪ್ರಧಾನಿ ಪದಗ್ರಹಣಕ್ಕೆ ಮೋದಿ ಹೋಗ್ತಾರಾ?

By Web DeskFirst Published Jul 31, 2018, 6:34 PM IST
Highlights

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪಾಕಿಸ್ತಾನಕ್ಕೆ ಭೇಟಿ ನೀಡಿಲಿದ್ದಾರೆಯೇ? ಸದ್ಯದ ಬೆಳವಣಿಗೆಗಳು ಹೌದು ಎನ್ನುತ್ತಿವೆ. ಪಾಕಿಸ್ತಾನದ ರಾಜಕೀಯ ಚಿತ್ರಣ ಬದಲಾದ ಮೇಲೆ ಭಾರತದೊಂದಿಗಿನ ಸಂಬಂಧವೂ ಬದಲಾಗಬಹುದೇ? ಉತ್ತರ ಸದ್ಯಕ್ಕೆ ಗೊತ್ತಿಲ್ಲ.

ಇಸ್ಲಾಮಾಬಾದ್[ಜು.31]   ಪಾಕಿಸ್ತಾನದ ಪ್ರಧಾನಿಯ ಪದಗ್ರಹಣ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸುವ ಬಗ್ಗೆ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷ ಚಿಂತನೆ ನಡೆಸಿದೆ

ಪಿಟಿಐ ಪಕ್ಷದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಪ್ರಧಾನಿ ಮೋದಿ ಸೇರಿದಂತೆ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದರ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ಬಹುಮತ ಗಳಿಸಿದ ಇಮ್ರಾನ್ ಖಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಮಾತನಾಡಿರುವುದು ಭಾರತ-ಪಾಕ್ ನಡುವೆ  ಹೊಸ ಅಧ್ಯಾಯ ಪ್ರಾರಂಭವಾಗುವ ನಿಟ್ಟಿನಲ್ಲಿ ಸ್ವಾಗತಾರ್ಹ ಬೆಳವಣಿಗೆ ಎಂದೇ ವಿಶ್ಲೇಷಣೆ ಮಾಡಲಾಗಿದೆ.

ಇಮ್ರಾನ್ ಖಾನ್ ಪ್ರಮಾಣ ವಚನಕ್ಕೆ ಶುಭ ಕೋರಿದ ಮೋದಿ

ವಿದೇಶಾಂಗ ಇಲಾಖೆಯೊಂದಿಗೆ ಚರ್ಚೆ ನಡೆಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸುವ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟಿಸಲಾಗುವುದು ಎಂದು ಿಮ್ರಾನ್ ಖಾನ್ ಪಕ್ಷದ ನಾಯಕರು ಹೇಳಿದ್ದಾರೆ. ಚುನಾವಣೆಯಲ್ಲಿ ಗೆದ್ದಿದ್ದಕ್ಕಾಗಿ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಕ್ಕೆ  ಮೋದಿಗೆ ಖಾನ್ ಧನ್ಯವಾದ ಹೇಳಿದ್ದರು.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಬಂದಿದ್ದರು. 2015ರಲ್ಲಿ ವಿದೇಶದಿಂದ ಹಿಂದಿರುಗುತ್ತಿದ್ದ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿ ಷರೀಫ್ ಗೆ ಜನ್ಮದಿನದ ಶುಭಾಶಯ ತಿಳಿಸಿದ್ದರು. ಆದರೆ ಇದಾದ ಮೇಲೆ 2016ರಲ್ಲಿ ಭಾರತದ ಸೖನಿಕ ನೆಲೆಗಳ ಮೇಲೆ ಪಾಕಿಸ್ತಾನ ಕಾರಣವಿಲ್ಲದೇ ದಾಳಿ ಮಾಡಿತ್ತು.  ಅಲ್ಲಿಂದ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹಳಸಿ ಹೋಗಿತ್ತು.

click me!