
ಬೆಂಗಳೂರು[ಜು. 12] ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಡಿಸಿ ವಿಜಯ್ ಶಂಕರ್ ಅವರಿಗೆ ಅರ್ಜಿ ವಜಾದ ಶಾಕ್ ಮಧ್ಯಾಹ್ನ ಸಿಕ್ಕಿದ್ದರೆ ಸಂಜೆ ರಾತ್ರಿ ವೇಳೆಗೆ ಜಪ್ತಿ ಬಹುದೊಡ್ಡ ಆಘಾತ ನೀಡಿದೆ.
ಐಎಂಎ ಮತ್ತು ಅಡೋನಿ ಎರಡೂ ಸಂಸ್ಥೆಗಳು ಸಹಭಾಗಿತ್ವ ವಹಿಸಿ ನಗರದಲ್ಲಿ ಫ್ಲೈ ಓವರ್ ನಿರ್ಮಾಣದ ಗುತ್ತಿಗೆ ಪಡೆದಿದ್ದವು. ಇದಕ್ಕಾಗಿ ಅಡೋನಿ ಸಂಸ್ಥೆಗೆ ಐಎಂಎ ಸಂಸ್ಥೆ ಮುಂಗಡವಾಗಿ 1.5 ಕೋಟಿ ರೂ. ನೀಡಿತ್ತು. ಈ ಸಂಸ್ಥೆಗಳಿಗೆ ಫ್ಲೈ ಓವರ್ ಗುತ್ತಿಗೆ ನೀಡಲು ವಿಜಯ್ ಶಂಕರ್ 2.5 ಕೋಟಿ ಲಂಚ ಪಡೆದಿದ್ದರು ಎಂಬ ಆರೋಪವೂ ಕೇಳಿ ಬಂದಿದೆ. ಈಗ ವಿಜಯ್ ಶಂಕರ್ ಅವರಿಗೆ ಸೇರಿದ್ದು ಎನ್ನಲಾದ 2.5 ಕೋಟಿ ರೂ. ಹಣ ಜಪ್ತಿ ಮಾಡಲಾಗಿದೆ.
ಜಾಮೀನು ಅರ್ಜಿ ವಜಾ, ಆವರಣದಲ್ಲೇ ಕಣ್ಣೀರು ಹಾಕಿದ ಡಿಸಿ ವಿಜಯ್ ಶಂಕರ್
ಅಲ್ಲದೇ ಅಡೋನಿ ಸಂಸ್ಥೆಗೆ ಸಂಬಂಧಪಟ್ಟ ಬಸವನಗುಡಿ ರೌಡಿಶೀಟರ್ ಮುನೀರ್ ಅಲಿಯಾಸ್ ಗನ್ ಮುನೀರ್, ಬ್ರಿಗೇಡ್ ಬಾಬು ಸೇರಿದಂತೆ ಐವರನ್ನ ಬಂಧಿಸಲಾಗಿದೆ.
ಐಎಂಎ ವಂಚನೆ ಪ್ರಕರಣ, ಆರಂಭದಿಂದ ಇಲ್ಲಿಯವರೆಗೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.