ನಾನು ನನಗೆ ನೀಡಿದ ಹುದ್ದೆಯಿಂದ ತೃಪ್ತಿ ಹೊಂದಿದ್ದೇನೆ. ಪಕ್ಷ ನೀಡಿದ ಜವಾಬ್ದಾರಿ ನಿಭಾಯಿಸುತ್ತೇನೆ. ಈ ಬಗ್ಗೆ ಯಾವುದೇ ಪ್ರತಿಭಟನೆ ಮಾಡದಿರಿ ಎಂದು ಸಚಿವ ಶ್ರೀ ರಾಮುಲು ತಮ್ಮ ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.
ಬಳ್ಳಾರಿ [ಆ.28] : ರಾಜ್ಯದ ಜನರಿಗೆ ವಿನಂತಿ ಮಾಡುತ್ತೇನೆ. ನಮ್ಮ ಪಕ್ಷ ತಾಯಿ ಇದ್ದಂತೆ. ಪಕ್ಷ ತೆಗೆದುಕೊಂಡ ತೀರ್ಮಾನಕ್ಕೆ ನಾನು ಬದ್ಧ, ಆದ್ದರಿಂದ ವೈಯಕ್ತಿಕ ಅಭಿಪ್ರಾಯ ಬದಿಗೊತ್ತಿ ಕೆಲಸ ಮಾಡಿ ಎಂದು ಶ್ರೀ ರಾಮುಲು ತಮ್ಮ ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಶ್ರೀ ರಾಮುಲು ತಮಗೆ ಡಿಸಿಎಂ ಹುದ್ದೆ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಬೆಂಬಲಿಗರಿಗೆ ಯಾವುದೇ ಪ್ರತಿಭಟನೆ ಮಾಡಬೇಡಿ ಎಂದು ಹೇಳಿದ್ದಾರೆ.
ನಮ್ಮ ಪಕ್ಷಕ್ಕಾಗಿ ಎಲ್ಲರೂ ಒಂದಾಗಿ ದುಡಿಯೋಣ. ಎಲ್ಲಾ ಜನರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಬಿಜೆಪಿ ಸೇರಿದಂತೆ ನಾನೂ ಮಾಡುತ್ತೇನೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಬಗ್ಗೆ ನಾನು ಯಾವುದೆ ಬೇಡಿಕೆ ಇಟ್ಟಿಲ್ಲ. ಸದ್ಯ ನಾನು ನೆರೆ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ ಎಂದು ಶ್ರೀ ರಾಮುಲು ಹೇಳಿದರು.
ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನು ತಮ್ಮ ವಾಲ್ಮೀಕಿ ಸಮುದಾಯದ ಮೀಸಲಾತಿ ವಿಚಾರವಾಗಿಯೂ ಪ್ರಸ್ತಾಪಿಸಿದ ಶ್ರೀ ರಾಮುಲು ಶೇ.7.5ರಷ್ಟು ಮೀಸಲಾತಿ ಕೊಡುವ ಕೆಲಸವಾಗಬೇಕಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಅಶ್ವಾಸನೆ ನೀಡಿದ್ದಾರೆ. ಮೀಸಲಾತಿ ಸಿಕ್ಕಲ್ಲಿ ನಮ್ಮ ಸಮುದಾಯಕ್ಕೆ ಎಲ್ಲಾ ಸೌಲಭ್ಯ ಸಿಕ್ಕಂತೆ ಎಂದರು.