
ತಿರುವನಂತಪುರಂ (ಅ. 14): ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸಿದರೆ ತನ್ನ ‘ಆತ್ಮಹತ್ಯಾ ದಳ’ದ 7 ಮಹಿಳಾ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳ ಶಿವಸೇನಾ ಘಟಕ ಎಚ್ಚರಿಕೆ ನೀಡಿದೆ.
ಮುಚ್ಚಿರುವ ದೇವಾಲಯದ ಬಾಗಿಲು ಅಕ್ಟೋಬರ್ 17ರಂದು ತೆರೆಯಲಿದ್ದು, ಅಂದು ಮಹಿಳೆಯರ ಪ್ರವೇಶ ತಡೆಯಲು ಪಂಪಾ ನದಿ ತಟದಲ್ಲಿ ಮಹಿಳೆಯರಿಂದಲೇ ಪ್ರತಿಭಟನೆ ನಡೆಸಲಾಗುತ್ತದೆ. ಈ ಪ್ರತಿಭಟನಾನಿರತರಲ್ಲಿ 7 ಮಂದಿಯ ‘ಆತ್ಮಹತ್ಯಾ ದಳ’ ಇರಲಿದೆ. ಒಂದು ವೇಳೆ ಮಹಿಳೆಯರಿಗೆ ಪ್ರವೇಶ ಲಭಿಸಿದರೆ ಅವರು ಪಂಪಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳ ಶಿವಸೇನಾ ನಾಯಕ ಪೆರಿಂಗಮ್ಮಾಳ್ ಆಜಿ ಶನಿವಾರ ಹೇಳಿದರು.
ಈ ನಡುವೆ, ಶಬರಿಮಲೆ ಅಯ್ಯಪ್ಪ ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಪ್ರಯರ್ ಗೋಪಾಲಕೃಷ್ಣನ್ ಕೂಡ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ‘ದೇಗುಲ ಪ್ರವೇಶಿಸುವ ಮಹಿಳೆಯರನ್ನು ಹುಲಿಗಳು ಹಾಗೂ ಪುರುಷರು ಹಿಡಿಯಲಿದ್ದಾರೆ’ ಎಂದು ಪ್ರಯರ್ ಎಚ್ಚರಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.