
ಬೆಂಗಳೂರು (ಡಿ. 25): ಪುತ್ರ ಪ್ರೇಮವೇ ಹಾಗೆ, ಯಾರನ್ನು ಯಾವ ಹಂತಕ್ಕಾದರೂ ಒಯ್ದು ಬಿಡುತ್ತದೆ. ಪುತ್ರಿ ರೂಪಾ ಶಶಿಧರ್ ಅವರನ್ನು ಮಂತ್ರಿ ಮಾಡಬೇಕೆಂದು ದಿಲ್ಲಿ ನಾಯಕರ ಮನೆಗಳಿಗೆ ಎಡತಾಕುತ್ತಿದ್ದ ಮುನಿಯಪ್ಪನವರು ತನಗಿಂತ ವಯಸ್ಸಿನಲ್ಲಿ ರಾಜಕಾರಣದಲ್ಲಿ ಎಷ್ಟೋ ಕಿರಿಯರಾದ ದಿನೇಶ್ ಗುಂಡೂರಾವ್, ಡಿ ಕೆ ಶಿವಕುಮಾರ್, ಈಶ್ವರ ಖಂಡ್ರೆ ಅವರ ರೂಮ್‌ಗಳಿಗೆ ಹೋಗಿ ಮಗಳ ಪರವಾಗಿ ಬ್ಯಾಟಿಂಗ್ ನಡೆಸುತ್ತಿದ್ದರು.
‘ಖರ್ಗೆ ಮಗ ಮಂತ್ರಿ ಆಗಬಹುದಾದರೆ ನನ್ನ ಮಗಳು ಯಾಕೆ ಬೇಡ’ ಎನ್ನುವುದು ಮುನಿಯಪ್ಪನವರ ಸಿಂಪಲ್ ತರ್ಕ. ಈ ಬಗ್ಗೆ ಅದೇ ದಲಿತ ಎಡ ಕೋಟಾದಲ್ಲಿ ಮಂತ್ರಿ ಆಗಲು ಓಡಾಡುತ್ತಿದ್ದ ಮುನಿಯಪ್ಪನವರ ಒಂದು ಕಾಲದ ಶಿಷ್ಯ ಆರ್ ಬಿ ತಿಮ್ಮಾಪುರ ಅವರನ್ನು ಕೇಳಿದರೆ, ‘ಅಯ್ಯೋ ನಮ್ಮ ಸಾಹೇಬರಿಗೆ ಮಗಳ ಮುಂದೆ ಯಾರೂ ಕಾಣಂಗೇ ಇಲ್ಲ ರೀ... ಬ್ಲಡ್ ಈಸ್ ಥಿಕ್ಕರ್ ದ್ಯಾನ್ ವಾಟರ್ ಖರೇ ನೋಡ್ರಿ ..’ ಎನ್ನುತ್ತಿದ್ದರು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.