
ನವದೆಹಲಿ : RBI ಶೀಘ್ರದಲ್ಲೇ ಹೊಸ 20 ರು. ನೋಟನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಹಳೆಯ 20 ರು ನೋಟಿಗಿಂತ ಹೆಚ್ಚಿn ಫೀಚರ್ ಈ ಹೊಸ ನೋಟಿನಲ್ಲಿ ಇರಲಿದೆ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ. ಹೊಸ ನೋಟುಗಳು ಮಾರುಕಟ್ಟೆಗೂ ಬಂದರೂ ಸಹ ಹಳೆ ನೋಟುಗಳ ಚಲಾವಣೆಯೂ ಮಾರುಕಟ್ಟೆಯಲ್ಲಿ ಮುಂದುವರಿಯಲಿವೆ.
ದೇಶದಲ್ಲಿ ನೋಟು ಅಮಾನ್ಯೀಕರಣವಾದ ಬಳಿಕ ಹೊಸ 10, 50, 100, 500, 200 ರು. ನೋಟುಗಳನ್ನು ಬಿಡುಗಡೆ ಮಾಡlಲಾಗಿತ್ತು. ಇದೀಗ ಹೊಸ 20 ರು. ನೋಟನ್ನು ಬಿಡುಗಡೆ ಮಾಡುವುದಾಗಿ RBI ಹೇಳಿದೆ.
2016ರ ನವೆಂಬರ್ ನಲ್ಲಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500 ಹಾಗೂ 1000 ರು. ನೋಟುಗಳನ್ನು ಅಮಾನ್ಯೀಕರಣಗೊಳಿಸಿತ್ತು. ಅದಾದ ಬಳಿಕ ಹೊಸ 500 ಹಾಗೂ 2000 ರು. ನೋಟುಗಳನ್ನು ಪರಿಚಯಿಸಿತ್ತು.
RBI ಪ್ರಕಾರ 4.92 ಬಿಲಿಯನ್ ಹೊಸ 20 ರು. ನೋಟುಗಳನ್ನು ಕಳೆದ ಮಾರ್ಚ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಸದ್ಯ ಚಲಾವಣೆಯಲ್ಲಿರುವ ಹಣದಲ್ಲಿ 20 ರು. ನೋಟುಗಳ ಪ್ರಮಾಣ ಶೇ.9.8 ರಷ್ಟಿದ್ದು, ಇದೀಗ ಮತ್ತೆ ಹೊಸ ರೀತಿಯ 20 ರು. ನೋಟುಗಳನ್ನು ಮಾರುಕಟ್ಟೆಗೆ ಬಿಡಲು RBI ಸಜ್ಜಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.