ಪತ್ರಕರ್ತೆ ಗೌರಿ ಲಂಕೇಶ್‌ಗೆ ಜಾಮೀನು ಮಂಜೂರು

By internet desk-First Published Oct 1, 2016, 2:43 PM IST
Highlights

10 ಸಾವಿರ ರೂಪಾಯಿ ಶ್ಯೂರಿಟಿ, ಮತ್ತು 25 ಸಾವಿರ ಬಾಂಡ್ ಪಡೆದು ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿದೆ

ಹುಬ್ಬಳ್ಳಿ(ಅ.01): ಮಾನನಷ್ಟ ಮೊಕದ್ದಮೆ ಆರೋಪದಡಿ ಬಂಧನವಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್‌ಗೆ ಜಾಮೀನು ಮಂಜೂರಾಗಿದೆ. ಹುಬ್ಬಳ್ಳಿಯ ಎರಡನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಗೌರಿ ಅವರನ್ನು ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

10 ಸಾವಿರ ರೂಪಾಯಿ ಶ್ಯೂರಿಟಿ, ಮತ್ತು 25 ಸಾವಿರ ಬಾಂಡ್ ಪಡೆದು ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿದೆ. 2007ರಲ್ಲಿ `ದರೋಡೆಗಿಳಿದ ಬಿಜೆಪಿಗಳು' ಎಂಬ ತಲೆ ಬರಹದಡಿಯಲ್ಲಿ ಸಂಸದ ಪ್ರಹ್ಲಾದ್ ಜೋಷಿ ಅವರ ಕುರಿತು ಪತ್ರಕರ್ತೆ ಗೌರಿ ಲಂಕೇಶ್ ಲೇಖನವೊಂದು ಪ್ರಕಟಿಸಿದ್ದರು. ಈ ಸಂಬಂಧ ಗೌರಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಆದರೆ, ಇದರ ವಿಚಾರಣೆಗೆ ಗೌರಿ ಎರಡು ಬಾರಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ, ಬಂಧನ ವಾರೆಂಟ್ ಜಾರಿಯಾಗಿತ್ತು. ಇಂದು ವಿಚಾರಣೆ ನಡೆಸಿದ ಕೋರ್ಟ್ ಖುದ್ದು ಹಾಜರಾಗುವಂತೆ ಸಂಸದ ಪ್ರಹ್ಲಾದ್ ಜೋಷಿ ಅವರಿಗೂ ಸೂಚನೆ ನೀಡಿದೆ.

Latest Videos

click me!