ಉಪ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ರಣತಂತ್ರ

Published : Apr 04, 2017, 02:57 AM ISTUpdated : Apr 11, 2018, 01:01 PM IST
ಉಪ ಚುನಾವಣೆಯಲ್ಲಿ  ಗೆಲ್ಲಲು ಕಾಂಗ್ರೆಸ್ ರಣತಂತ್ರ

ಸಾರಾಂಶ

ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣಾ ಫಲಿತಾಂಶ ರಾಜ್ಯ ಕಾಂಗ್ರೆಸ್ ಮೇಲೆ ಮಹತ್ತರ ಪರಿಣಾಮ ಬೀರುವುದಂತೂ ನಿಶ್ಚಿತ. ಯಾಕೆಂದರೆ ಮತದಾನಕ್ಕೂ ಮುನ್ನವೇ  ಕಾಂಗ್ರೆಸ್'ನಲ್ಲಿ ಹಲವು ಲೆಕ್ಕಾಚಾರಗಳು ನಡೆಯುತ್ತಿವೆ. ಸೋಲಿನ ಹೊಣೆ ಹೊರುವವರ್ಯಾರು, ಗೆಲುವಿನ ಕ್ರೆಡಿಟ್ ಪಡೆಯುವವರಾರು ಎಂಬ ಬಗ್ಗೆ ಆಂತರಿಕವಾಗಿ ಸಮೀಕರಣ ಶುರುವಾಗಿದೆ.

ಮೈಸೂರು(ಎ.04): ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣಾ ಫಲಿತಾಂಶ ರಾಜ್ಯ ಕಾಂಗ್ರೆಸ್ ಮೇಲೆ ಮಹತ್ತರ ಪರಿಣಾಮ ಬೀರುವುದಂತೂ ನಿಶ್ಚಿತ. ಯಾಕೆಂದರೆ ಮತದಾನಕ್ಕೂ ಮುನ್ನವೇ  ಕಾಂಗ್ರೆಸ್'ನಲ್ಲಿ ಹಲವು ಲೆಕ್ಕಾಚಾರಗಳು ನಡೆಯುತ್ತಿವೆ. ಸೋಲಿನ ಹೊಣೆ ಹೊರುವವರ್ಯಾರು, ಗೆಲುವಿನ ಕ್ರೆಡಿಟ್ ಪಡೆಯುವವರಾರು ಎಂಬ ಬಗ್ಗೆ ಆಂತರಿಕವಾಗಿ ಸಮೀಕರಣ ಶುರುವಾಗಿದೆ.

ಸಾರ್ವತ್ರಿಕ ಚುನಾವಣೆಗೂ ಮುನ್ನವೇ ಬಂದೊದಗಿರುವ ಎರಡು ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ರಾಜ್ಯ ಕಾಂಗ್ರೆಸ್ ನಲ್ಲಿ ಹಲವು ಬೆಳವಣಿಗೆಗಳಿಗೆ ಕಾರಣವಾಗುವುದು ಖಚಿತವಾಗಿದೆ. ಯಾಕೆಂದರೆ ಎರಡು ಉಪಚುನಾವಣೆ ನಡೆಯುತ್ತಿರುವುದೇ ಲೆಕ್ಕಾಚಾರಗಳ ಮೇಲೆ. ಹಳೇ ಮೈಸೂರು ಭಾಗದಲ್ಲಿ ಮುಖ್ಯಮಂತ್ರಿಗಳ ವರ್ಚಸ್ಸನ್ನು ಈ ಚುನಾವಣೆ ಒರೆಗೆ ಹಚ್ಚಲಿದ್ದರೆ, ಕೆಪಿಸಿಸಿ ಅಧ್ಯಕ್ಷರ ಸಾಮರ್ಥ್ಯವನ್ನು ಪಣಕ್ಕಿಡಲಿದೆ. ಇದರ ಜೊತೆ ಪ್ರಮುಖವಾಗಿ  ಮೂವರು ಸಚಿವರ ಬಲಪ್ರದರ್ಶನಕ್ಕೂ ವೇದಿಕೆಯಾಗಲಿದೆ.

ರಾಜ್ಯ ಕಾಂಗ್ರೆಸ್'ನಲ್ಲಿ  ಬದಲಾವಣೆ ತರಲಿದೆಯಾ ಉಪಚುನಾವಣೆ?

ನಂಜನಗೂಡಿನಲ್ಲಿ ಕಾಂಗ್ರೆಸ್ ಗೆದ್ದರೆ ದಲಿತ ಮತಗಳನ್ನು ಸೆಳೆಯಬಲ್ಲ  ಸಾಮರ್ಥ್ಯವಿರುವ ನಾಯಕ ಎಂದು ಬಿಂಬಿಸಿಕೊಳ್ಳಲು, ಗುಂಡ್ಲುಪೇಟೆಯಲ್ಲಿ ಗೆದ್ದರೆ ಕೆಪಿಸಿಸಿ ಅಧ್ಯಕ್ಷರಾಗಿ ಸಮರ್ಥ ಎಂದು ಹೇಳಿಕೊಳ್ಳಲು ಈ ಚುನಾವಣೆ ಡಾ. ಜಿ. ಪರಮೇಶ್ಚರ್'ಗೆ ಅನುಕೂಲವಾಗಲಿದೆ. ಒಂದು ವೇಳೆ ಸೋತರೆ ಪರಮೇಶ್ವರ್ ಬಗ್ಗೆ ವ್ಯತಿರಿಕ್ತ ಸಂದೇಶ ರವಾನೆಯಾಗಲಿದೆ.

ಮುಂದಿನ ಚುನಾವಣೆಗೆ ನಾಯಕತ್ವ ವಹಿಸಲು ಸಿಎಂಗೆ ಅನುಕೂಲ

ಒಂದು ವೇಳೆ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ ಮುಂದಿನ ಚುನಾವಣೆಗೆ ಕೂಡಾ ತಮ್ಮದೇ ನಾಯಕತ್ವದಲ್ಲಿ ಹೋದರೆ ಮತ್ತೆ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂಬ ಸಂದೇಶ ರವಾನಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಸಹಕಾರಿಯಾಗಲಿದೆ. ಒಂದು ವೇಳೆ ಸೋತಲ್ಲಿ ತಮ್ಮ ತವರಿನಲ್ಲೇ ಉಪಚುನಾವಣೆ ಗೆಲ್ಲಿಸಿಕೊಳ್ಳಲಾಗಲಿಲ್ಲ ಎಂಬ ಕಾರಣಕ್ಕೆ ೨೦೧೮ ರ ಚುನಾವಣೆಗೆ ನೇತೃತ್ವ ವಹಿಸುವ ವಿಚಾರದಲ್ಲಿ ಲೆಕ್ಕಾಚಾರ ಶುರುವಾಗಬಹುದು.

ಇನ್ನು ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಗೆದ್ದರೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಯತ್ನದಲ್ಲಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಗೆ ಇನ್ನಷ್ಟು ಬಲ ತುಂಬಲಿದೆ. ಆಗ ಮುಂದಿನ ಚುನಾವಣೆಗೆ ಕಾಂಗ್ರೆಸ್ ನೇತೃತ್ವ ವಹಿಸುವ ವಿಚಾರದಲ್ಲೂ ಡಿ.ಕೆ. ಶಿವಕುಮಾರ್ ಹೆಸರು ಮುಂಚೂಣಿಗೆ ಬರಬಹುದು. ಇದಲ್ಲದೇ ಗುಂಡ್ಲುಪೇಟೆ ಮೇಲುಸ್ತುವಾರಿ ವಹಿಸಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಸಾಮರ್ಥ್ಯ ಹೆಚ್ಚಲು ಅವಕಾಶವಾಗಲಿದೆ. ಲಿಂಗಾಯಿತ ಮತ ಸೆಳೆಯಲು ಶಕ್ತ ಎಂಬ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ನಲ್ಲಿ ಹೆಚ್ಚಿನ ಜವಾಬ್ದಾರಿ ದೊರೆಯಬಹುದು ಮತ್ತು ಹೈಕಮಾಂಡ್ ಮಟ್ಟದಲ್ಲೂ ಕೊಂಚ ವರ್ಚಸ್ಸು ಬೆಳೆಸಿಕೊಳ್ಳಲು ಅನುಕೂಲವಾಗಲಿದೆ. ಇನ್ನು ನಂಜನಗೂಡಿನಲ್ಲಿ ಕಾಂಗ್ರೆಸ್ ಗೆದ್ದಲ್ಲಿ ದೊರೆಯುವ ಕ್ರೆಡಿಟ್‌ ನ ಅರ್ಧ ಪಾಲು ಸಚಿವ ಡಾ. ಎಚ್. ಸಿ. ಮಹದೇವಪ್ಪ ಅವರ ಪಾಲಾಗಲಿದೆ. ಶ್ರೀನಿವಾಸಪ್ರಸಾದ್ ಪ್ರಬಲ ಸ್ಫರ್ಧೆಯ ಮಧ್ಯೆಯೂ ವರ್ಚಸ್ಸು ಉಳಿಸಿಕೊಂಡಿರುವ ಹೆಗ್ಗಳಿಕೆಯೂ ಸಲ್ಲಲಿದೆ. ಒಂದು ವೇಳೆ ಸೋತರೆ ಪುತ್ರನಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲಿಲ್ಲ ಎಂಬ ಆರೋಪ ನೇರವಾಗಿ ಸಚಿವ ಮಹದೇವಪ್ಪ ಕುತ್ತಿಗೆಗೆ ಸುತ್ತಿಕೊಳ್ಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಗಲಕೋಟೆ: ಬುದ್ಧಿಮಾಂದ್ಯನ ಮೇಲೆ ಅಮಾನವೀಯ ಹಲ್ಲೆ
ವೀರವೈಶ ಲಿಂಗಾಯತ ಸಮಾಜ ಒಡೆದಾಳಲು ಯತ್ನ: ವಿಜಯೇಂದ್ರ