
ಮುಂಬೈ(ಎ.04): ಬೆಂಗಳೂರು ಮೂಲದ 24 ವರ್ಷದ ಯುವಕನೋರ್ವ ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅರ್ಜುನ್ ಭಾರದ್ವಾಜ್ ಎಂಬ ಯುವಕ ಇಲ್ಲಿನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ನ 19 ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ವಿಡಿಯೋವೊಂದನ್ನು ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಾನೆ.
ಮೃತ ಅರ್ಜುನ್ ಇಲ್ಲಿನ ವಿಲೆ ಪಾರ್ಲೆಯಲ್ಲಿರುವ ನರ್ಸೀ ಮೋನಜೀ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕಾನಮಿಕ್ಸ್'ನಲ್ಲಿ 3ನೇ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ. ಸೋಮವಾರ ಮಧ್ಯರಾತ್ರಿ 3:30 ಸುಮಾರಿಗೆ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್'ನಲ್ಲಿ ರೂಮ್ ಬುಕ್ ಮಾಡಿದ್ದ. ಕೆಲ ಸಮಯದ ಬಳಿಕ ಊಟಕ್ಕಾಗಿ ಆರ್ಡರ್ ಮಾಡಿದ್ದ. ಇದಾದ ನಂತರ ಬೆಳಗ್ಗೆ 6:30ರ ವೇಳೆಗೆ ರೂಮ್'ನ ಕಿಟಕಿಯ ಗಾಜು ಒಡೆದು ಅಲ್ಲಿಂದಲೇ ಜಿಗಿದಿದ್ದಾನೆ.
ಅರ್ಜುನ್ ಸಾವಿಗೂ ಮುನ್ನ ತನ್ನ ಆತ್ಮಹತ್ಯೆ ಕುರಿತಂತೆ ವಿಡಿಯೋವೊಂದನ್ನು ಮಾಡಿ, ಆ ವಿಡಿಯೋ ಫೇಸ್ ಬುಕ್'ನಲ್ಲಿ ಲೈವ್ ನೀಡಿದ್ದಾನೆ. ಫೇಸ್'ಬುಕ್'ನಲ್ಲಿ ಅರ್ಜುನ್‌ನ ಆ ವಿಡಿಯೋ ನೋಡಿ ಹೋಟೆಲ್ ಸಿಬ್ಬಂದಿ ರೂಮ್'ಗೆ ಧಾವಿಸಿದ್ದಾರೆ. ಅಷ್ಟರಲ್ಲೇ ಆತ ರೂಮ್'ನಿಂದ ಜಿಗಿದು ಬಿಟ್ಟಿದ್ದಾನೆ. ಅಲ್ಲದೇ, ರೂಮ್'ನಲ್ಲಿ ಡೆತ್‌ನೋಟು ಸಿಕ್ಕಿದ್ದು, ತೀವ್ರ ಖಿನ್ನತೆ ಹಾಗೂ ಡಗ್ಸ್ ಅಡಿಕ್ಟ್'ನಿಂದ ಇಂತಹ ನಿರ್ಧಾರಕ್ಕೆ ಬಂದಿದ್ದಾಗಿ ಅರ್ಜುನ್ ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು, ಅರ್ಜುನ್ ತಂದೆ-ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದು, ಅವರಿಗೆ ಮಗನ ಸಾವಿನ ಕುರಿತು ಮಾಹಿತಿ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.