ನಾಡಧ್ವಜದಿಂದ ದೇಶದ ಘನತೆ, ಸಮಗ್ರತೆಗೆ ಅಪಾಯ: ಅನಂತ್ ಕುಮಾರ್

Published : Jul 22, 2017, 11:19 AM ISTUpdated : Apr 11, 2018, 01:06 PM IST
ನಾಡಧ್ವಜದಿಂದ ದೇಶದ ಘನತೆ, ಸಮಗ್ರತೆಗೆ ಅಪಾಯ: ಅನಂತ್ ಕುಮಾರ್

ಸಾರಾಂಶ

ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಹೊಂದುವುದು ದೇಶದ ಘನತೆ, ಸಮಗ್ರತೆ ಹಾಗೂ ಸಾರ್ವಭೌಮತೆಗೆ ಅಪಾಯಕಾರಿ ಎಂದು ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ. ‘ದಿ ಪ್ರಿಂಟ್’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅನಂತ್ ಕುಮಾರ್, ‘ಭಾರತೀಯರು ಭಾವನಾತ್ಮಕವಾಗಿ, ಸಾಂವಿಧಾನಿಕವಾಗಿ ಹಾಗೂ ಎಲ್ಲಾ ರೀತಿಯಲ್ಲೂ ಒಂದೇ ದೇಶವಾಗಿದ್ದೇವೆ. ದೇಶಕ್ಕೊಂದೇ ತ್ರಿವರ್ಣ ಧ್ವಜ, ಅದು ಪವಿತ್ರವಾದುದ್ದು. ಸಿದ್ದರಾಮಯ್ಯ ಸರ್ಕಾರ ಈ ವಿಚಾರದಲ್ಲಿ ಕೈಯಾಡಿಸಬಾರದು. ಅದು ದೇಶದ ಘನತೆ, ಸಮಗ್ರತೆ ಹಾಗೂ ಸಾರ್ವಭೌಮತೆಗೆ ಅಪಾಯಕಾರಿಯಾಗಿದೆ’ ಎಂದಿದ್ದಾರೆ.

ಬೆಂಗಳೂರು: ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಹೊಂದುವುದು ದೇಶದ ಘನತೆ, ಸಮಗ್ರತೆ ಹಾಗೂ ಸಾರ್ವಭೌಮತೆಗೆ ಅಪಾಯಕಾರಿ ಎಂದು ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

‘ದಿ ಪ್ರಿಂಟ್’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅನಂತ್ ಕುಮಾರ್, ‘ಭಾರತೀಯರು ಭಾವನಾತ್ಮಕವಾಗಿ, ಸಾಂವಿಧಾನಿಕವಾಗಿ ಹಾಗೂ ಎಲ್ಲಾ ರೀತಿಯಲ್ಲೂ ಒಂದೇ ದೇಶವಾಗಿದ್ದೇವೆ. ದೇಶಕ್ಕೊಂದೇ ತ್ರಿವರ್ಣ ಧ್ವಜ, ಅದು ಪವಿತ್ರವಾದುದ್ದು. ಸಿದ್ದರಾಮಯ್ಯ ಸರ್ಕಾರ ಈ ವಿಚಾರದಲ್ಲಿ ಕೈಯಾಡಿಸಬಾರದು. ಅದು ದೇಶದ ಘನತೆ, ಸಮಗ್ರತೆ ಹಾಗೂ ಸಾರ್ವಭೌಮತೆಗೆ ಅಪಾಯಕಾರಿಯಾಗಿದೆ’ ಎಂದಿದ್ದಾರೆ.

ತ್ರಿವರ್ಣ ಧ್ವಜವು 125 ಕೋಟಿ ಭಾರತೀಯರಿಗೆ ಸ್ಫೂರ್ತಿಯಾಗಿದೆ, ಸಿದ್ದರಾಮಯ್ಯ ರಿಗೆ ಇದೆಲ್ಲಾ ಅರ್ಥ ಆಗಿಲ್ಲವೆಂದಾದಲ್ಲಿ, ಅವರು ದೇಶದ ಏಕತೆ, ಸಮಗ್ರತೆ ಹಾಗೂ ಸಾರ್ವಭೌಮತೆ ಬಗ್ಗೆ ಅ ಆ ಇ ಈಯನ್ನು ಕಲಿಯುವ ಅಗತ್ಯವಿದೆ, ಎಂದು ಅನಂತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಹಿಂದಿ ಹೇರಿಕೆ ಬಗ್ಗೆ ಮಾತನಾಡಿರುವ ಅನಂತ್ ಕುಮಾರ್, ತ್ರಿ-ಭಾಷಾ ಸೂತ್ರವು ಸಂವಿಧಾನದ ಪಿತಾಮಹರು ರೂಪಿಸಿದ ಯೋಜನೆಯಾಗಿದೆ. ಅದನ್ನು ಮಾತು ಹಾಗೂ ಕೃತಿಯಲ್ಲಿ ಪಾಲಿಸಬೇಕಾಗಿದೆ.  ಆದುದರಿಂದ ನಮ್ಮ ಮುಂದೆ ಮಾತೃಭಾಷೆ, ರಾಷ್ಟ್ರೀಯ ಭಾಷೆ ಹಾಗೂ ಅಂತರಾಷ್ಟ್ರೀಯ ಭಾಷೆಗಳಿವೆ. ಹಿಂದಿ ರಾಷ್ಟ್ರೀಯ ಭಾಷೆಯೋ ಅಲ್ಲವೋ ಎಂಬ ನಿರರ್ಥಕ ಚರ್ಚೆಯನ್ನು ಬಿಟ್ಟು, ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾ ತ್ರಿಭಾಷಾ ಸೂತ್ರವನ್ನು ಪಾಲಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ