74 ವರ್ಷದ ಅಜ್ಜಿಗೆ ಗರ್ಭಧಾರಣೆ ಮಾಡಿಸಿದ್ದ ಆಸ್ಪತ್ರೆಗೆ ನೋಟಿಸ್ ಜಾರಿ!

By Kannadaprabha NewsFirst Published Sep 29, 2019, 8:49 AM IST
Highlights

ವಯಸ್ಸಾದ ಮಹಿಳೆಗೆ ಕೃತಕ ಗರ್ಭ ಧಾರಣೆ ಮಾಡುವ ಮೂಲಕ ಆಕೆಯ ಜೀವವನ್ನು ಅಪಾಯಕ್ಕೆ ಸಿಲುಕಿಸಿದ್ದು ಏಕೆ? | 74 ವರ್ಷದಲ್ಲಿ ಮಗು ಹೆತ್ತ ಮಹಿಳೆಗೆ ಕೃತಕ ಗರ್ಭಧಾರಣೆ ಮಾಡಿದ ಆಸ್ಪತ್ತೆಗೆ ನೋಟಿಸ್‌| 

ಮುಂಬೈ[ಸೆ.29]: 74 ವರ್ಷದ ಎರಮಟ್ಟಿಮಂಗಯಮ್ಮ ಎಂಬ ಮಹಿಳೆಗೆ ಕೃತಕ ಗರ್ಭಧಾರಣೆ ಮಾಡಿ ಆಕೆ ಅವಳಿ ಮಕ್ಕಳು ಹೆರಲು ಕಾರಣವಾದ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಅಹಲ್ಯಾ ಐವಿಎಫ್‌ ಕ್ಲಿನಿಕ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನೋಟಿಸ್‌ ಜಾರಿ ಮಾಡಿದೆ.

74ರಲ್ಲಿ ಮಗು ಹೆತ್ತ ವೃದ್ಧೆ: ಪತಿ, ಪತ್ನಿ ಇಬ್ಬರೂ ಐಸಿಯುನಲ್ಲಿ!

ವಯಸ್ಸಾದ ಮಹಿಳೆಗೆ ಕೃತಕ ಗರ್ಭ ಧಾರಣೆ ಮಾಡುವ ಮೂಲಕ ಆಕೆಯ ಜೀವವನ್ನು ಅಪಾಯಕ್ಕೆ ಸಿಲುಕಿಸಿದ್ದು ಏಕೆ? ನಿಮ್ಮ ಆಸ್ಪತ್ರೆಯ ಪರವಾನಗಿಯನ್ನು ಏಕೆ ರದ್ದು ಮಾಡಬಾರದು ಎಂಬ ಬಗ್ಗೆ ವಿವರಣೆ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ವೈದ್ಯಕೀಯ ಮಂಡಳಿಯ ನಿಯಮದ ಪ್ರಕಾರ ಕೃತಕ ಗರ್ಭಧಾರಣೆಗೆ ಒಳಪಡುವ ಮಹಿಳೆ 45 ವರ್ಷ ಹಾಗೂ ವೀರ್ಯ ದಾನ ಮಾಡುವ ಪುರುಷ 50 ವರ್ಷದ ಒಳಗಿನವರಾಗಿರಬೇಕು.

74ರ ಇಳಿವಯಸ್ಸಿಗೆ ಅಮ್ಮ: ಅಜ್ಜಿಯ ಮಡಿಲಲ್ಲಿ ಅವಳಿ ಮಕ್ಕಳ ನೋಡಮ್ಮ!

ಮಂಗಯಮ್ಮ ಹಾಗೂ ಆಕೆಯ ಪತಿ ಎ. ರಾಜಾ ತಮಗೆ 57 ವರ್ಷಗಳಿಂದ ಮಕ್ಕಳಾಗದ ಕಾರಣ ಅಹಲ್ಯಾ ಐವಿಎಫ್‌ ಕ್ಲಿನಿಕ್‌ನಲ್ಲಿ ವೈದ್ಯರೊಬ್ಬರ ಸಲಹೆಯಂತೆ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನದ ಮೂಲಕ ಮಗು ಪಡೆದುಕೊಂಡಿದ್ದರು.

click me!