ತಂದೆ ಎಂದರೆ ಹೆಣ್ಣು ಮಗಳಿಗೆ ಯಾವಾಗ್ಲೂ ಹೀರೋನೆ. ಅದರಂತೆ ಇಲ್ಲೋರ್ವ ತಂದೆ ತನ್ನ ಜೀವದ ಹಂಗನ್ನೂ ತೊರೆದು ಶಾರ್ಕ್ ಬಾಯಿಂದ ಮಗಳನ್ನು ರಕ್ಷಿಸಿ ಹೀರೋ ಆಗಿದ್ದಾರೆ.
ನಾರ್ಥ್ ಕೆರೊಲಿನಾ : ಅಪ್ಪ ಎಂದರೆ ಮಗಳಿಗೆ ಮೊದಲ ಹೀರೊ. ಇದಕ್ಕೆ ಸಾಕ್ಷಿ ಎನ್ನುವಂತೆ ಅಮೆರಿಕಾದಲ್ಲಿ ಶಾರ್ಕ್ ಬಾಯಿಗೆ ತುತ್ತಾಗಬೇಕಿದ್ದ ಮಗಳನ್ನು ಉಳಿಸಿಕೊಳ್ಳುವಲ್ಲಿ ಅಪ್ಪ ತನ್ನ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ನಾರ್ಥ್ ಕೆರೊಲಿನಾದಲ್ಲಿ ನಡೆದ ಈ ಘಟನೆಯಲ್ಲಿ ಮಗಳ ಪಾಲಿಗೆ ಹೀರೋ ಆಗಿದ್ದಾರೆ.
ಮಗಳು ಪೈಗಿ ವಿಂಟರ್ ಹಾಗೂ ತಂದೆ ಚಾರ್ಲಿ ವಿಂಟರ್ ಅಟ್ಲಾಂಟಿಕಾ ಸಾಗರದ ಬೀಚ್ ನಲ್ಲಿ ನಿಂತಿದ್ದ ವೇಳೆ ಮಗಳ ಮೇಲೆ ಬೃಹತ್ ಗಾತ್ರ ಶಾರ್ಕ್ ದಾಳಿ ಮಾಡಿದೆ. ಅಲ್ಲದೇ ನೀರಿನಾಳಕ್ಕೆ ಆಕೆಯನ್ನು ಎಳೆದೊಯ್ದಿದೆ.
undefined
ಈ ವೇಳೆ ಫೈರ್ ಫೈಟರ್ ಹಾಗೂ ಮಾಜಿ ಪ್ಯಾರಾ ಮೆಡಿಕ್ ಆದ ಚಾರ್ಲಿ ಅವರು ನೀರಿಗೆ ಧುಮುಕಿ ಶಾರ್ಕ್ ಮೂಗಿಗೆ ಬಲವಾಗಿ ಗುದ್ದುವ ಮೂಲಕ ಮಗಳನ್ನು ಕಾಪಾಡಿದ್ದಾರೆ. ಆಕೆಯ ಎಡಗಾಲನ್ನು ಕಚ್ಚಿ ತುಂಡಾಗಿಸಿದೆ. ಆದರೆ ತಂದೆ ಚಾರ್ಲಿ ಮಗಳ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಗಳನ್ನು ಬಿಡುವವರೆಗೂ ಕೂಡ ಬೃಹತ್ ಗಾತ್ರದ ಶಾರ್ಕ್ ಗೆ ಗುದ್ದಿದ ಚಾರ್ಲಿ, ಮಗಳನ್ನು ಬದುಕಿಸಿಕೊಂಡಿದ್ದಾರೆ. ತಕ್ಷಣ ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಚೇತರಿಕೆ ಕಂಡು ಬಂದಿದೆ.