
ನವದೆಹಲಿ(ಏ.09): ಪ್ರೇಮಕತೆ ಎಲ್ಲಿ ಅರಳುವುದಿಲ್ಲ ಹೇಳಿ, ಪುಟ್ಟ ಗುಡಿಸಲುನಿಂದ ಇಡಿದು ಅರಮನೆಗಳಲ್ಲೂ ನೂರಾರು ಕತೆಗಳಿರುತ್ತವೆ. ಒಂದೊಂದು ಸ್ಟೋರಿ ಒಂದೊಂದು ರೀತಿಯಲ್ಲಿ ವಿಭಿನ್ನವಾಗಿರುತ್ತವೆ.
ಈ ಪ್ರೇಮಕತೆ ಅರಳಿದ್ದು ದೆಹಲಿಯ ಐಎಎಸ್ ತರಬೇತಿ ಇಲಾಖೆಯಲ್ಲಿ. ಪ್ರೇಮ ನಿವೇದನೆ ಮಾಡಿದ್ದು 2ನೇ ರ‌್ಯಾಂಕ್ ಪಡೆದ ಅತರ್ ಅಮೀರ್ ಉಲ್ ಶಫಿ. ಪ್ರೀತಿಯ ಬಲೆಗೆ ಬಿದ್ದಿದ್ದು ಮೊದಲ ಟಾಪರ್ ಟಿನಾ ದಬಿ. ಇವರಿಬ್ಬರು 2015ರ ಐಎಎಸ್ ಟಾಪರ್'ಗಳು. ಇವರಿಬ್ಬರ ಜೋಡಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ಟೀನಾ ದೆಹಲಿ ಮೂಲದವರಾದರೆ, ಶಫಿ ಕಾಶ್ಮೀರದವರು. ಟಾಪರ್'ಗಳಾಗಿ 2016ರಲ್ಲಿ ದೆಹಲಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಪ್ರೇನಾನುಬಂಧ ಶುರುವಾಗಿದೆ.ಇವರಿಬ್ಬರು ಅನ್ಯ ಧರ್ಮದವರಾದ ಕಾರಣ ಕೆಲವು ಧರ್ಮ ಮುಖಂಡರು ಪ್ರತಿಭಟನೆ ನಡೆಸಿದರು. ಟಿನಾ ಹರ್ಯಾಣ ರಾಜ್ಯವನ್ನು ಕೇಡರ್ ಆಗಿ ಆಯ್ಕೆ ಮಾಡಿಕೊಂಡರೆ ಶಫಿ ಜಮ್ಮು ಕಾಶ್ಮೀರವನ್ನು ಆರಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.