ಭಾರತ-ಪಾಕ್‌ ಯುದ್ಧ ವಿಮಾನ ಮುಖಾಮುಖಿ: ಪಂಜಾಬ್‌ ಗಡಿಯಲ್ಲಿ ಆತಂಕಕಾರಿ ಘಟನೆ

By Web DeskFirst Published Apr 2, 2019, 8:50 AM IST
Highlights

ಮತ್ತೆ ಭಾರತ-ಪಾಕ್‌ ಯುದ್ಧ ವಿಮಾನ ಮುಖಾಮುಖಿ| ಪಂಜಾಬ್‌ ಗಡಿ ಭಾಗದಲ್ಲಿ ಭಾನುವಾರ ರಾತ್ರಿ ಘಟನೆ

ನವದೆಹಲಿ[ಏ.02]: ಭಾರತ ಮತ್ತು ಪಾಕಿಸ್ತಾನದ ಯುದ್ಧ ವಿಮಾನಗಳು ಗಡಿ ಭಾಗದಲ್ಲಿ ಮುಖಾಮುಖಿಯಾಗಿದ್ದ ಆತಂಕಾರಿ ಘಟನೆ ಭಾನುವಾರ ರಾತ್ರಿ ನಡೆದಿದೆ. ಇದು ಪುಲ್ವಾಮಾ ದಾಳಿ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನಗೊಂಡಿದ ಪರಿಸ್ಥಿತಿಯನ್ನು ಇನ್ನುಷ್ಟುವಿಷಮಗೊಳಿಸಿದೆ ಎನ್ನಲಾಗಿದೆ.

ಪುಲ್ವಾಮಾ ದಾಳಿ, ಬಳಿಕ ಬಾಲಾಕೋಟ್‌ ಮೇಲೆ ಭಾರತದ ದಾಳಿ, ನಂತರದಲ್ಲಿ ಪಾಕ್‌ ವಿಮಾನಗಳು ಭಾರತದ ಗಡಿಯೊಳಗೆ ನುಗ್ಗಿದ್ದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಉಭಯ ದೇಶಗಳು ಗಡಿ ಪ್ರದೇಶದಲ್ಲಿ ಸೇನಾ ಜಮಾವಣೆ ಹೆಚ್ಚಿಸಿದ್ದವು.

ಭಾನುವಾರ ರಾತ್ರಿ ಪಾಕ್‌ ಸೇನೆ, ಭಾರತದ ಸೇನಾ ಜಮಾವಣೆ ಪರಿಶೀಲಿಸಲು ಡ್ರೋನ್‌ ಒಂದನ್ನು ಪಂಜಾಬ್‌ ಗಡಿ ಪ್ರದೇಶದ ಬಳಿ ಕಳುಹಿಸಿತ್ತು. ಜೊತೆಗೆ ಅದರ ಮೇಲೆ ಕಣ್ಗಾವಲು ಇಡಲು 4 ಎಫ್‌ 16 ಯುದ್ಧ ವಿಮಾನಗಳೂ ಬಂದಿದ್ದವು. ರಾಡಾರ್‌ಗಳು ಈ ಮಾಹಿತಿ ನೀಡುತ್ತಲೇ ಭಾರತೀಯ ಸೇನೆ ಕೂಡಾ ಸುಖೋಯ್‌ ಎಸ್‌ಯು 30 ಮತ್ತು ಇತ್ತೀಚೆಗೆ ಬಾಲಾಕೋಟ್‌ ಮೇಲೆ ದಾಳಿ ನಡೆಸಿದ್ದ ಮಿರಾಜ್‌ ವಿಮಾನಗಳನ್ನು ಗಡಿಯತ್ತ ಕಳುಹಿಸಿತ್ತು.

ಭಾರತದ ಯುದ್ಧ ವಿಮಾನಗಳ ಸಂಚಾರ ಕಾಣುತ್ತಲೇ ಪಾಕ್‌ ವಿಮಾನ ಮತ್ತು ಡ್ರೋನ್‌ ಎರಡೂ ನಾಪತ್ತೆಯಾದವು ಎಂದು ಮೂಲಗಳು ತಿಳಿಸಿವೆ.

ಏನಾಯ್ತು?

ಗಡಿಯಲ್ಲಿ ಭಾರತದ ಸೇನಾ ಜಮಾವಣೆ ಪತ್ತೆಗೆ ಪಾಕ್‌ನಿಂದ ಡ್ರೋನ್‌ ಸಂಚಾರ

ಡ್ರೋನ್‌ ಮೇಲೆ ಕಣ್ಗಾವಲು ಇಡಲು ಎರಡು ಯುದ್ಧ ವಿಮಾನಗಳ ಸಂಚಾರ

ವಿಷಯ ಪತ್ತೆಯಾಗುತ್ತಲೇ ಭಾರತದಿಂದಲೂ ಸುಖೋಯ್‌, ಮಿರಾಜ್‌ ರವಾನೆ

click me!