
ಬೆಂಗಳೂರು[ಏ.02]: ದೇವನಹಳ್ಳಿ ನವಯುಗ ಟೋಲ್ ಶುಲ್ಕ ಹೆಚ್ಚಳದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಟೋಲ್ ಮಾರ್ಗದ ಮೂಲಕ ಸಂಚರಿಸುವ ಹವಾನಿಯಂತ್ರಿತ(ಎಸಿ) ವಾಯುವಜ್ರ ಬಸ್ ಬಳಕೆದಾರರ ಶುಲ್ಕವನ್ನು 1 ಹೆಚ್ಚಿಸಿದೆ.
ಟೋಲ್‌ನಲ್ಲಿ ಈ ಹಿಂದೆ ಬಸ್‌ಗೆ ಏಕಮುಖ ಸಂಚಾರಕ್ಕೆ 270 ಇದ್ದ ಶುಲ್ಕವನ್ನು .280ಕ್ಕೆ ಏರಿಸಲಾಗಿದೆ. ದಿನಕ್ಕೆ 2 ಸಿಂಗಲ್ ಜರ್ನಿಗೆ 405 ಇದ್ದ ಶುಲ್ಕವನ್ನು 420 ಹಾಗೂ ಮಾಸಿಕ ಪಾಸ್ ಶುಲ್ಕವನ್ನು 8,945 ರಿಂದ 9,330ಕ್ಕೆ ಹೆಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಏ.1ರಿಂದ ಅನ್ವಯವಾಗುವಂತೆ ವಾಯುವಜ್ರ ಬಸ್ ಬಳಕೆದಾರರ ಶುಲ್ಕವನ್ನು 13 ರಿಂದ 14ಕ್ಕೆ ಏರಿಸಿದೆ.
ಸಾಮಾನ್ಯ ಬಸ್‌ಗಳ ಬಳಕೆದಾರರ ಶುಲ್ಕ ಹಿಂದಿನಂತೆಯೇ (6) ಮುಂದುವರಿಸಿದೆ. ಈ ದರ ದೈನಂದಿನ, ಮಾಸಿಕ ಹಾಗೂ ಇತರೆ ಪಾಸುದಾರರಿಗೆ ಅನ್ವಯವಾಗವಾಲಿದೆ. ಆದರೆ ವಿದ್ಯಾರ್ಥಿ ರಿಯಾಯಿತಿ ಹಾಗೂ ಅಂಗವಿಕಲ ಪಾಸುದಾರರಿಗೆ ಪರಿಷ್ಕೃತ ಶುಲ್ಕ ಅನ್ವಯವಾಗುವುದಿಲ್ಲ. ಇನ್ನು ಮುಂದೆ ವಾಯುವಜ್ರ ಮಾಸಿಕ ಪಾಸ್ ಪಡೆಯುವವರು ಪಾಸ್ ಶುಲ್ಕದ ಜತೆಗೆ 420 ಬಳಕೆದಾರರ ಶುಲ್ಕ ಪಾವತಿಸಬೇಕು ಎಂದು ನಿಗಮ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.