ವಾಯುಸೇನಾ ಸಿಬ್ಬಂದಿ ಹಣೆಗೆ ವಿಭೂತಿ, ತಿಲಕ ಧರಿಸುವಂತಿಲ್ಲ :ಸುಪ್ರೀಂ

By Suvarna Web DeskFirst Published Dec 17, 2016, 1:16 PM IST
Highlights

ವಾಯುಸೇನಾ ಸಿಬ್ಬಂದಿ ಧಾರ್ಮಿಕ ನಂಬಿಕೆಯಾಧಾರದಲ್ಲಿ ಹಣೆಗೆ, ಮೊಣಕೈಗೆ ವಿಭೂತಿಯನ್ನು, ತಿಲಕವನ್ನು ಹಚ್ಚುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ.

ನವದೆಹಲಿ (ಡಿ.17): ವಾಯುಸೇನಾ ಸಿಬ್ಬಂದಿ ಧಾರ್ಮಿಕ ನಂಬಿಕೆಯಾಧಾರದಲ್ಲಿ ಹಣೆಗೆ, ಮೊಣಕೈಗೆ ವಿಭೂತಿಯನ್ನು, ತಿಲಕವನ್ನು ಹಚ್ಚುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ.

ಸಿಬ್ಬಂದಿಗಳು ಸಮವಸ್ತ್ರದಲ್ಲಿದ್ದಾಗ ಧಾರ್ಮಿಕ ಗುರುತುಗಳು ಅವರಲ್ಲಿ ಕಾಣಿಸುವಂತಿಲ್ಲವೆಂದು ವಾಯುಸೇನಾ ನಿಯಮ ಸ್ಪಷ್ಟವಾಗಿ ಹೇಳುತ್ತದೆ. ಹಾಗಾಗಿ ಮುಸ್ಲೀಂ ಸಿಬ್ಬಂದಿಯವರು ಗಡ್ಡವನ್ನು ಬಿಡುವಂತಿಲ್ಲವೆಂದು ಮೊನ್ನೆ ಸುಪ್ರೀಂ  ಹೇಳಿತ್ತು.

ಅದೇ ರೀತಿ ಹಿಂದುತ್ವದ ಸಂಕೇತವಾದ ವಿಭೂತಿ, ತಿಲಕವನ್ನು ಇಡಬಾರದು ಎಂದು ಇಂದು ಆದೇಶಿಸಿದೆ.

click me!