
ಶಿಮ್ಲಾ(ಜು.21): ಸುಮಾರು 50 ವರ್ಷಗಳ ಹಿಂದೆ ಭಾರತೀಯ ವಾಯುಪಡೆಯ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧನ ಮೃತದೇಹ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹಿಮಾಚಲ ಪ್ರದೇಶದ ಢಾಕಾ ಗ್ಲೇಷಿಯರ್ ಕ್ಯಾಂಪ್ ಬಳಿ 50 ವರ್ಷಗಳ ಹಿಂದೆ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಯೋದನ ಮೃತದೇಹ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ದೊರೆತಿದೆ.
ಪರ್ವತಾರೋಹಿಗಳ ತಂಡವೊಂದು ಚಂದ್ರಭಾಗದ 13ನೇ ಶೃಂಗದ ಬಳಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿದ್ದ ವೇಳೆ, ಯೋಧನ ಮೃತದೇಹ ಸಿಕ್ಕಿದೆ ಎಂದು ಹೇಳಲಾಗಿದೆ. ಇದೇ ವೇಳೆ ತಂಡಕ್ಕೆ ವಿಮಾನದ ಮತ್ತಷ್ಟು ಅವಶೇಷಗಳು ದೊರೆತಿದ್ದು, 50 ವರ್ಷಗಳ ಹಿಂದಿನ ಘಟನೆಗೆ ಮರುಜೀವ ಬಂದಂತಾಗಿದೆ.
1968 ಫೆಬ್ರವರಿ 7ರಂದು ಚಂಡೀಗಢದಿಂದ ಲೇಹ್ಗೆ 102 ಜನರನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ವಾಯುಪಡೆಯ AN-12 ವಿಮಾನ ಹವಾಮಾನ ವೈಪರೀತ್ಯದ ಕಾರಣ ತನ್ನ ಸಂಪರ್ಕ ಕಳೆದುಕೊಂಡಿತ್ತು. ನಂತರ ಹಿಮಾಚಲ್ ಪ್ರದೇಶದ ಲಹೌಲ್ ಕಣಿವೆಯ ಬಳಿ ಅಪಘಾತವಾಗಿರುವುದು ತಿಳಿದಿತ್ತು. 2003ರಲ್ಲಿ ಅಪಘಾತವಾಗಿದ್ದ ವಿಮಾನದ ಕೆಲವು ಅವಶೇಷಗಳು ದೊರೆತಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.