ಸುಡುವ ಸೂರ್ಯನತ್ತ ಪಾರ್ಕರ್ ಪಯಣ: ತಿಳಿಯಲಿದೆ ರವಿಯ ಗುಣ!

 |  First Published Jul 21, 2018, 4:28 PM IST

ನಾಸಾ ಪಾರ್ಕರ್ ಯೋಜನೆಗೆ ಕ್ಷಣಗಣನೆ

ಸೂರ್ಯನ ಅಧ್ಯಯನಕ್ಕೆ ಸಜ್ಜಾದ ಪಾರ್ಕರ್

ಸೂರ್ಯನ ಸಮೀಪಕ್ಕೆ ಹೋಗಲಿರುವ ನೌಕೆ

ಸೂರ್ಯನ ಕುರಿತು ಮಾನವ ಜ್ಞಾನ ವೃದ್ಧಿ 


ಫ್ಲೋರಿಡಾ(ಜು.21): ಸೌರ ಮಾರುತದ ಉಷ್ಣತೆಗೆ ಕಾರಣವಾಗುವ ನಕ್ಷತ್ರದ ವಾತಾವರಣದ ಹೊರಗಿನ ಭಾಗವನ್ನು ಅಧ್ಯಯನ ಮಾಡಲು ಶೀಘ್ರದಲ್ಲೇ ನಾಸಾ ಪಾರ್ಕರ್ ಶೋಧ ನೌಕೆಯನ್ನು ಸೂರ್ಯನತ್ತ ಹಾರಿ ಬಿಡಲಿದೆ.   

ಪಾರ್ಕರ್ ಒಂದು ಸಣ್ಣ ಕಾರಿನ ಗಾತ್ರದ ರೋಬಾಟ್ ಗಗನನೌಕೆಯಾಗಿದ್ದು, ಇದನ್ನು ಫ್ಲೋರಿಡಾದಲ್ಲಿ ಕೇಪ್ ಕ್ಯಾನವರಲ್ ನಿಂದ ಇದನ್ನು ನಭಕ್ಕೆ ಚಿಮ್ಮಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯೋಜಿತ ಏಳು-ವರ್ಷದ ಕಾರ್ಯಾಚರಣೆಯ ಪ್ರಾರಂಭ ಇದೇ ಆಗಸ್ಟ್ 6 ರಂದು ಪ್ರಾರಂಭವಾಗಲಿದೆ. 

Tap to resize

Latest Videos

ಸೌರ ಮೇಲ್ಮೈಯಿಂದ 3.8 ದಶಲಕ್ಷ ಮೈಲುಗಳಷ್ಟು (6.1 ಮಿಲಿಯನ್ ಕಿ.ಮಿ) ವ್ಯಾಪ್ತಿಯಲ್ಲಿ ಸೂರ್ಯನ ಕರೋನದೊಳಗೆ ಹಾರಲು ಪಾರ್ಕರ್ ಶೋಧ ನೌಕೆಯನ್ನು ಅಭಿವೃದ್ಧಿಪಡಿಸಲಾಗಿದೆ.  ಪಾರ್ಕರ್ ಯಾವುದೇ ಬಾಹ್ಯಾಕಾಶ ನೌಕೆಗಿಂತ ಸೂರ್ಯನಿಗೆ ಏಳು ಪಟ್ಟು ಸಮೀಪದಲ್ಲಿರಲಿದೆ. 

1976 ರಲ್ಲಿ 27 ಮಿಲಿಯನ್ ಮೈಲಿಗಳಷ್ಟು (43 ಮಿಲಿಯನ್ ಕಿ.ಮಿ) ಒಳಗೆ ಹೆಲಿಯೊಸ್ 2 ಎಂಬ ಶೋಧ ನೌಕೆ ಸೂರ್ಯನಿಗೆ ತೀರಾ ಸಮೀಪದಲ್ಲಿ ಹಾದು ಹೋಗಿತ್ತು.  ಭೂಮಿಯ ಸೂರ್ಯನಿಂದ ಸರಾಸರಿ ದೂರವು 93 ಮಿಲಿಯನ್ ಮೈಲುಗಳು (150 ಮಿಲಿಯನ್ ಕಿ.ಮಿ).

ಪಾರ್ಕರ್ ಶೋಧ ನೌಕೆ ಯೋಜನೆಗೆ ಸುಮಾರು 1.5 ಶತಕೋಟಿ ಡಾಲರ್ ವೆಚ್ಛವಾಗಲಿದ್ದು, ನಾಸಾದ ಲಿವಿಂಗ್ ವಿತ್ ಎ ಸ್ಟಾರ್ ಕಾರ್ಯಕ್ರಮದಡಿ ಹಮ್ಮಿಕೊಂಡಿರುವ ಮೊದಲ ಯೋಜನೆ ಇದಾಗಿದೆ. 

ಸೌರ ಮಾರುತವನ್ನು ಚಿತ್ರಿಸಲು ಮತ್ತು ಎಲೆಕ್ಟ್ರಿಕ್ ಮತ್ತು ಮ್ಯಾಗ್ನೆಟಿಕ್ ಫೀಲ್ಡ್ಸ್, ಕರೋನಲ್ ಪ್ಲಾಸ್ಮಾ ಮತ್ತು ಶಕ್ತಿಯ ಕಣಗಳನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಿದ ಉಪಕರಣಗಳನ್ನು ಬಳಸಿ, ಸುಮಾರು ಏಳು ವರ್ಷಗಳ ಕಾಲ ಪಾರ್ಕರ್ ಸಂಶೋಧನೆ ನಡೆಸಲಿದೆ. ಸೂರ್ಯನ ಕರೋನದ ಆಂತರಿಕ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ನಾಸಾ ಉದ್ದೇಶಿಸಿದೆ.

click me!