ನನ್ನ ರಾಜಕೀಯ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸ್ತೇನೆ: ಮುದ್ದಹನುಮೇಗೌಡ

Published : May 21, 2019, 03:01 PM IST
ನನ್ನ ರಾಜಕೀಯ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸ್ತೇನೆ: ಮುದ್ದಹನುಮೇಗೌಡ

ಸಾರಾಂಶ

ಜಿಲ್ಲೆಯ ಯಾವುದೇ ಹಿತಾಸಕ್ತಿ ಕಾಪಾಡೋದ್ರಲಿ ಪಕ್ಚಾತೀತವಾಗಿ ನನ್ನ ಸಹಕಾರ ಇದ್ದೇ ಇರುತ್ತದೆ| ರಾಜ್ಯದ ಜನತೆ ಜೊತೆಗೆ ಜಿಲ್ಲೆಯ ಜನತೆ ನನ್ನ ಅನುಮಾನಿಸಿಲ್ಲ| ರಾಜಕೀಯದ ಹೊಸ ಇನ್ನಿಂಗ್ ಆರಂಭ ಮಾಡುತ್ತೇನೆ ಸಂಸದ ಮುದ್ದಹನುಮೇಗೌಡ ವಿಶ್ವಾಸ

ತುಮಕೂರು[ಮೇ.21]: ತುಮಕೂರು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ, ಬಳಿಕ ಹಿಂಪಡೆದಿದ್ದ ಸಂಸದ ಮುದ್ದಹನುಮೇಗೌಡ ವಿರುದ್ಧ  ಹಣ ಪಡೆದಿರುವ ಆರೋಪಗಳು ಕೇಳಿ ಬಂದಿದ್ದವು. ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ್ದ ಸಂಸದರು ತಾನು ಯಾವುದೇ ಹಣ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈ ಪ್ರಕರಣದ ಬಳಿಕ ಮೌನ ತಾಳಿದ್ದ ಮುದ್ದೇ ಹನುಮೇಗೌಡರು ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗುವ ಸುಳಿವು ನೀಡಿದ್ದಾರೆ.

ಹೌದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಸದ ಮುದ್ದೆಹನುಮೇಗೌಡ 'ಮುಂದಿನ ದಿನದಲ್ಲಿ ನಮ್ಮ ಜಿಲ್ಲೆಯ ಯಾವುದೇ ಹಿತಾಸಕ್ತಿ ಕಾಪಾಡುವಲ್ಲಿ ಪಕ್ಷಾತೀತವಾಗಿ ನನ್ನ ಸಹಕಾರ  ಇದ್ದೇ ಇರುತ್ತದೆ. ಚುನಾವಣೆ ಘೋಷಣೆ ನಂತರ ಆದ ಬೆಳವಣಿಗೆಯಿಂದ ರಾಜಕೀಯ ಪ್ರಹಸನ ನಡೆಯಿತು. ರಾಜ್ಯದ ಜನತೆ ಜೊತೆಗೆ ಜಿಲ್ಲೆಯ ಜನತೆ ನನ್ನ ಅನುಮಾನಿಸಿಲ್ಲ. ಕೆಲ ವಿಕೃತ ಮನಸ್ಸುಗಳನ್ನು ಬಿಟ್ಟು, ಜಿಲ್ಲೆಯ ಜನರ ಮನಸು ನನಗಾಗಿ ಮಿಡಿದಿದೆ. ಅದು ನನ್ನ ಪೂರ್ವ ಜನ್ಮದ ಪುಣ್ಯ' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಸಕ್ರಿಯ ರಾಜಕೀಯಕ್ಕೆ ಮರಳುವ ಕುರಿತು ಮಾತನಾದ್ದು 'ಮುಂದೆ ರಾಜಕೀಯದಲ್ಲಿ ಸಕ್ರಿಯವಾಗುತ್ತೇನೆ. ರಾಜಕೀಯದ ಹೊಸ ಇನ್ನಿಂಗ್ಸ್ ಆರಂಭ ಮಾಡುತ್ತೇನೆ. ನನ್ನ ರಾಜಕೀಯ ಜೀವನ ಇಲ್ಲಿಗೆ ಮುಗಿದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡೇ ಹೊಸ ಇನ್ನಿಂಗ್ಸ್  ಆರಂಭಿಸುತ್ತೇನೆ' ಎಂದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live:ಕೇರಳದಲ್ಲಿ ಮೊದಲ ಸಲ ಪಾಲಿಕೆ ಚುನಾವಣೇಲಿ ಬಿಜೆಪಿ ಜಯಭೇರಿ
ಆರ್‌ಸಿಬಿ ಕಾಲ್ತುಳಿತದ ದುರ್ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ? ಕೊಹ್ಲಿ ಭಾಗಿ