ಮನದ ನೋವನ್ನು ಬಿಚ್ಚಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

By Web DeskFirst Published Oct 29, 2018, 7:44 AM IST
Highlights

ಕಳೆದ ವಿಧಾನಸಭಾ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಚಾಮುಂಡೇಶ್ವರಿಯಲ್ಲಿ ಸೋತಿದ್ದು ಈ ಬಗ್ಗೆ ಇದೀಗ ತಮ್ಮ ನೋವನ್ನು ಹೊರ ಹಾಕಿದ್ದಾರೆ. 

ಬಾಗಲಕೋಟೆ :  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಾದ ಸೋಲಿನ ನೋವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಜನರ ಮುಂದೆ ಹೇಳಿಕೊಂಡಿದ್ದಾರೆ. ‘‘ನನ್ನನ್ನು ಮೈಸೂರಿನಿಂದ ಓಡಿಸಿಬಿಟ್ಟಿದ್ದಾರೆ, ಸೋಲಿಸಿ ಬಿಟ್ಟಿದ್ದಾರೆ. ನಾನೀಗ ಬಾಗಲಕೋಟೆ ಜಿಲ್ಲೆಯವ. ಕಾಂಗ್ರೆಸ್ ಸೇರದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ ’’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತಾನೆ ಎಂದು ಹೊಟ್ಟೆ ಕಿಚ್ಚಿ ನಿಂದ ಮೈಸೂರಲ್ಲಿ ನನ್ನನ್ನು ಸೋಲಿಸಿದರು. ಇದೇ ಕಾರ
ಣಕ್ಕೆ ರಾಹು, ಕೇತು, ಶನಿ, ಎಲ್ಲರೂ ಒಂದಾಗಿ ಸೇರಿಕೊಂ ಡು ನನ್ನನ್ನು ಸೋಲಿಸಿದರು ಎಂದು ನಾನು ಹೇಳಿದ್ದೇನೆ. ಆದರೆ ಬಾದಾಮಿ ಜನ ನನ್ನನ್ನು ಕೈಹಿಡಿದರು. ಮತ್ತೆ ರಾಜಕೀಯ ಶಕ್ತಿ ತುಂಬಿದರು ಎಂದು ತಿಳಿಸಿದರು.

‘‘ನನ್ನನ್ನು ಸೋಲಿಸುವುದಕ್ಕೆ ಕಾರಣ ಹೊಟ್ಟೆ ಕಿಚ್ಚು. ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ ಅನ್ನೋ ಒಂದೇ ಒಂದು ಹೊಟ್ಟೆ ಕಿಚ್ಚು. ಆದರೆ ಒಂದು ಸಂತೋಷವೆಂದರೆ, ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗದೇ ಇರಬಹುದು. ಆದರೆ ಜನರ ಪ್ರೀತಿ, ವಿಶ್ವಾಸ, ಅಭಿಮಾನ ಉಳಿಸಿಕೊಂಡಿದ್ದೇನೆ ಎಂದರು. ನನ್ನನ್ನು ಮೈಸೂರಿನಿಂದ ಓಡಿಸಿಬಿಟ್ಟಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ನನ್ನನ್ನು ಸೋಲಿಸಿ ಬಿಟ್ಟಿದ್ದಾರೆ. ಹಾಗಾಗಿ ನಾನು ಈಗ ಬಾಗಲಕೋಟೆ ಜಿಲ್ಲೆಯವನು. ವಿಧಾನಸಭೆ ಚುನಾವಣೆ ಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಕೇವಲ ಅರ್ಜಿ ಹಾಕಿ ಹೋಗಿದ್ದೆ.

ಆದರೂ ಇಲ್ಲಿನ ಜನ ಕೈ ಹಿಡಿದು ಆಶೀರ್ವಾದ ಮಾಡಿ, ರಾಜಕೀಯ ಶಕ್ತಿ ತುಂಬಿದ್ದಾರೆ. ಹಾಗಾಗಿ ಬಾದಾಮಿ ಜನರ ಋಣ ತೀರಿಸಲೇಬೇಕಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. 

click me!