ಶುರುವಾಯ್ತು ‘ಆಪರೇಶನ್ ಅಟಲ್ ಎಜ್ಯುಕೇಶನ್ ರೆಕಾರ್ಡ್ ಸರ್ಚ್’!

By Web DeskFirst Published Aug 21, 2018, 1:20 PM IST
Highlights

ಅಟಲ್ ಶೈಕ್ಷಣಿಕ ದಾಖಲೆಗಳ ಹುಟುಕಾಟ! ಮಾಜಿ ಪ್ರಧಾನಿ ಪದವಿ ದಾಖಲೆಗಳು ಸಿಗುತ್ತಿಲ್ಲ! ದಯನಾನಂದ್ ಆಂಗ್ಲೋ ವೇದಿಕ್ ಕಾಲೇಜ್! 1947 ರಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದ ಅಟಲ್
 

ಲಕ್ನೋ(ಆ.21): ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಕಳಸ ಯಾತ್ರೆ ಇನ್ನಷ್ಟೇ ಆರಂಭವಾಗಿದ್ದು, ದೇಶಾದ್ಯಂತ ಸಂಚರಿಸಬೇಕಿದೆ. ಈ ಮಧ್ಯೆ ಅಟಲ್ ಅವರ ಶೈಕ್ಷಣಿಕ ದಾಖಲೆಗಳ ಹುಡುಕಾಟ ಪ್ರಕ್ರಿಯೆ ಜೋರು ಪಡೆದಿದೆ.

ಹೌದು, ಅಟಲ್ ಬಿಹಾರಿ ವಾಜಪೇಯಿ ಅವರ ಶೈಕ್ಷಣಿಕ ದಾಖಲೆಗಖಿಗಾಗಿ ಸರ್ಕಾರ  ಹುಡುಕಾಟ ಆರಂಭಿಸಿದೆ. 1945 ರಿಂದ 1947 ರ ಅವಧಿಯಲ್ಲಿ ಅಟಲ್ ಕಾನ್ಪುರದ ದಯನಾನಂದ್ ಆಂಗ್ಲೋ ವೇದಿಕ್ [ಡಿಎವಿ] ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪದವಿ ಓದುತ್ತಿದ್ದರು. ಈ ಕಾಲೇಜು ಆಗ ಆಗ್ರಾ ವಿಶ್ವವಿದ್ಯಾಲಯ[ಈಗ ಅಂಬೇಡ್ಕರ್ ವಿವಿ]ದ ವ್ಯಾಪ್ತಿಯಲ್ಲಿ ಬರುತ್ತಿತ್ತು.

ಆದರೆ ಡಿಎವಿ ಕಾಲೇಜು ಆಡಳಿತ ಮಂಡಳಿ ಬಳಿ ಅಟಲ್ ಅವರ ಪದವಿ ಸಂಬಂಧಿತ ಯಾವುದೇ ದಾಖಲೆಗಳಿಲ್ಲದಿರುವುದು ಅಟಲ್ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಡಿಎವಿ ಪ್ರಾಂಶುಪಾಲ ಅಮಿತ್ ಶ್ರೀವಾಸ್ತವ್, 1947 ರ ಸಂದರ್ಭದಲ್ಲಿ ಪದವಿ ದಾಖಲೆಗಳನ್ನು ನೇರವಾಗಿ ವಿದ್ಯಾರ್ಥಿಗೆ ಕೊಡುತ್ತಿದ್ದರಿಂದ ಅಟಲ್ ಕುರಿತು ಯಾವುದೇ ಶೈಕ್ಷಣಿಕ ದಾಖಲೆ ಕಾಲೇಜಿನಲ್ಲಿಲ್ಲ ಎಂದು ತಿಳಿಸಿದ್ದಾರೆ.

ಆದರೂ ಅಟಲ್ ಕುರಿತ ಯಾವುದಾದರೂ ಒಂದು ದಾಖಲೆ ಕಾಲೇಜಿನಲ್ಲಿ ಇರಬಹುದು ಎಂದು ಆಶಿಸಲಾಗಿದ್ದು, ಅದರಂತೆ ಆಟಲ್ ಅವರ ಶೈಕ್ಷಣಿಕ ದಾಖಲೆಗಳಿಗಾಗಿ ಹುಟುಕಾಟ ಆರಂಭಿಸಲಾಗಿದೆ.

ಇನ್ನು ಛತ್ರಪತಿ ಸಾಹೂಜೀ ಮಹಾರಾಜ್ ವಿವಿ ಕುಲಪತಿ ಪ್ರೋ.ನೀಲಂ ಗುಪ್ತಾ ಪ್ರಕಾರ, ಪ್ರತೀ ವಿದ್ಯಾರ್ಥಿಯ ವೈಯಕ್ತಿಕ ಮತ್ತು ಶೈಕ್ಷಣಿಕ ದಾಖಲೆಗಳು ವಿದ್ಯಾರ್ಥಿ ವ್ಯಾಸಾಂಗ ಮಾಡುತ್ತಿರುವ ಕಾಲೇಜು ಯಾವ ವಿವಿ ವ್ಯಾಪ್ತಿಗೆ ಒಳಪಟ್ಟಿರುತ್ತದೆಯೋ ಅದೇ ವಿವಿಯಲ್ಲಿ ಸಿಗುತ್ತದೆ. ಅದರಂತೆ ಅಟಲ್ ಅವರ ಶೈಕ್ಷಣಿಕ ದಾಖಲೆಗಳು ಕೂಡ ಇಂದಿನ ಅಂಬೇಡ್ಕರ್ ವಿವಿಯಲ್ಲಿ ಇರಬೇಕು ಎಂಬುದು ನೀಲಂ ಗುಪ್ತಾ ಅವರ ವಾದ.

click me!