ಕೇಂದ್ರಕ್ಕೆ ಸುಪ್ರೀಂ ಚಾಟಿ: ಸಿಬಿಐ ನಿರ್ದೇಶಕರಾಗಿ ಅಲೋಕ ವರ್ಮಾ!

By Web DeskFirst Published Jan 8, 2019, 12:26 PM IST
Highlights

ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಲ್ಲಿ ಮುಖಭಂಗ| ಅಲೋಕ್ ವರ್ಮಾ ಸಿಬಿಐ ಮುಖ್ಯಸ್ಥರಾಗಿ ಮುಂದುವರಿಕೆ| ‘ಕಡ್ಡಾಯ ರಜೆ ಮೇಳೆ ಕಳುಹಿಸಿದ್ದ ಕೇಂದ್ರದ ಕ್ರಮ ಸರಿಯಲ್ಲ’| ಅಲೋಕ್ ವರ್ಮಾ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್| ಮತ್ತೆ ಸಿಬಿಐ ನಿರ್ದೇಶಕರಾಗಿ ಮುಂದುವರೆಯುವಂತೆ ಸೂಚನೆ

ನವದೆಹಲಿ(ಜ.08): ಸಿಬಿಐ ಒಳಜಗಳದ ಕುರಿತು ಮಹತ್ವದ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಆದೇಶ ಪಕ್ಕಕ್ಕೆ ಸರಿಸಿ ಸಿಬಿಐ ನಿರ್ದೇಶಕರಾಗಿ ಮತ್ತೆ ಮುಂದುವರೆಯುವಂತೆ ಅಲೋಕ್ ವರ್ಮಾ ಅವರಿಗೆ ಸೂಚನೆ ನೀಡಿದೆ. 

ತಮ್ಮ ಅಧಿಕಾರಕ್ಕೆ ಕತ್ತರಿ ಹಾಕಿ ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪನ್ನು ಇಂದು ಸುಪ್ರೀಂಕೋರ್ಟ್ ಪ್ರಕಟಿಸಿದ್ದು, ಕಡ್ಡಾಯ ರಜೆ ಮೇಲೆ ಅಲೋಕ್ ವರ್ಮಾವನ್ನು ಕಳುಹಿಸಿರುವ ಕೇಂದ್ರ ಸರ್ಕಾರದ ಆದೇಶ ತಪ್ಪು ಎಂದು ಹೇಳಿದೆ.

Supreme Court reinstates Alok Verma as CBI Director, however, he cannot take major policy decisions. pic.twitter.com/k5NMFdRbyU

— ANI (@ANI)

ಹುದ್ದೆಯಿಂದ ಕೆಳಗಿಳಿಸುವ ಮುನ್ನ ಸಿಜೆಐ, ಪ್ರಧಾನಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಆಯ್ಕೆ ಸಮಿತಿಯಲ್ಲಿ ಕೇಂದ್ರ ಚರ್ಚೆ ನಡೆಸಬೇಕಿತ್ತು ಎಂದು ಹೇಳಿರುವ ನ್ಯಾಯಾಲಯ, ಕೇಂದ್ರ ಸರ್ಕಾರದ ಆದೇಶವನ್ನು ತಿರಸ್ಕರಿಸಿ ಮತ್ತೆ ಸಿಬಿಐ ನಿರ್ದೇಶಕ ಹುದ್ದೆಯಲ್ಲಿ ಮುಂದುವರೆಯುವಂತೆ ಅಲೋಕ್ ವರ್ಮಾ ಅವರಿಗೆ ಸೂಚಿದೆ. ಅಲ್ಲದೆ, ಸದ್ಯಕ್ಕೆ ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳುವಂತಿಲ್ಲ ಎಂದು ತಿಳಿಸಿದೆ. 

ಅಲೋಕ್ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಅವರು ಲಂಚ ಸ್ವೀಕಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪರಸ್ಪರ ಕಿತ್ತಾಡಿಕೊಂಡಿದ್ದರು.

click me!