
ನವದೆಹಲಿ[ಜ.08]: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರಬಹುದು. ಆದರೆ 10 ವರ್ಷಗಳ ಯುಪಿಎ ಅಧಿಕಾರಾವಧಿಗೆ ಹೋಲಿಸಿದರೆ ನರೇಂದ್ರ ಮೋದಿ ಆಳ್ವಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಅಷ್ಟೇನೂ ಅಪಾಯ ಎದುರಾಗಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಲಭಿಸಿರುವ ಅಂಕಿ-ಅಂಶಗಳು ಹೇಳುತ್ತಿವೆ.
2004ರಿಂದ 2017ರವರೆಗೆ ದೇಶದಲ್ಲಿ ನಡೆದ ಕೋಮುಗಲಭೆಗಳು, ಅದರಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯ ಆರ್‌ಟಿಐನಡಿ ನೀಡಿದೆ.
ಅದರ ಪ್ರಕಾರ, 2004ರಿಂದ 2017ರವರೆಗೆ ದೇಶದಲ್ಲಿ 10399 ಕೋಮುಗಲಭೆಗಳು ಸಂಭವಿಸಿ, 1605 ವ್ಯಕ್ತಿಗಳು ಮೃತಪಟ್ಟಿದ್ದಾರೆ. 30723 ಮಂದಿ ಗಾಯಗೊಂಡಿದ್ದಾರೆ. ಆ ಪೈಕಿ ಯುಪಿಎ ಅಧಿಕಾರದಲ್ಲಿದ್ದ 2004ರಿಂದ 2008ರವರೆಗೆ 3858 ಘಟನೆಗಳು ಸಂಭವಿಸಿದ್ದರೆ, ಯುಪಿಎ ಎರಡನೇ ಅವಧಿಯಾದ 2009ರಿಂದ 2013ರವರೆಗೆ 3621 ಗಲಭೆಗಳು ಸಂಭವಿಸಿವೆ. ಆದರೆ, 2004ರಿಂದ 2017ರವರೆಗೆ 2920 ಗಲಭೆಗಳು ಉಂಟಾಗಿವೆ ಎಂದು ಅಂಕಿ-ಅಂಶಗಳು ತಿಳಿಸಿವೆ.
10 ವರ್ಷಗಳ ಯುಪಿಎ ಅವಧಿಯಲ್ಲಿ ಕೋಮುಗಲಭೆಗಳಿಂದ 1216 ಮಂದಿ ಸಾವನ್ನಪ್ಪಿದ್ದರೆ, 2014ರಿಂದ 2017ರವರೆಗಿನ ಬಿಜೆಪಿ ಅವಧಿಯಲ್ಲಿ 389 ಮೃತಪಟ್ಟಿದ್ದಾರೆ ಎಂದು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ