ವಿಶ್ವದಾದ್ಯಂತ ಈಗ ‘ಪೆಟ್ಯಾ' ಸೈಬರ್‌ ದಾಳಿ

By Suvarna Web DeskFirst Published Jun 28, 2017, 12:30 PM IST
Highlights

ಇತ್ತೀಚೆಗಷ್ಟೇ ‘ವಾನ್ನಾಕ್ರೈ' ಸೈಬರ್‌ ದಾಳಿ ಮೂಲಕ ಜಗತ್ತನ್ನೇ ತಲ್ಲಣಗೊಳಿಸಿದ್ದ ದಾಳಿಕೋರರು, ಇದೀಗ ಮತ್ತೆ ಜಗತ್ತಿನಾದ್ಯಂತ ಕಂಪ್ಯೂಟರ್‌ಗಳ ಮೇಲೆ ಸುಲಿಗೆ ದಾಳಿ ನಡೆಸಿದ್ದಾರೆ. ‘ಪೆಟ್ಯಾ' ಹೆಸರಿನಲ್ಲಿ ಮೊದಲಿಗೆ ಉಕ್ರೇನ್‌ನಲ್ಲಿ ವಿಮಾನಯಾನ, ಬ್ಯಾಂಕ್‌, ಸರ್ಕಾರಿ ಕಚೇರಿಗಳ ಮೇಲೆ ಭಾರೀ ಪ್ರಮಾಣದಲ್ಲಿ ಸೈಬರ್‌ ದಾಳಿ ನಡೆಸಲಾಗಿದೆ. ಇದರ ಬೆನ್ನಲ್ಲೇ ಫ್ರಾನ್ಸ್‌ನ ಕಂಪ್ಯೂಟರ್‌ ವ್ಯವಸ್ಥೆಗಳ ಮೇಲೂ ದಾಳಿ ನಡೆದಿದೆ. ಭಾರತದಲ್ಲಿ ಇಂತಹ ಯಾವುದೇ ಭೀತಿಯಿಲ್ಲ ಎಂದು ಸೈಬರ್‌ ಭದ್ರತಾ ಸಂಸ್ಥೆಯ ಮುಖ್ಯಸ್ಥ ಸಂಜಯ್‌ ಬಹ್‌್ಲ ಹೇಳಿದ್ದಾರೆ. ಆದರೆ ಈ ನಡುವೆ ಮುಂಬೈ ಬಂದರಿನಲ್ಲಿ ಜಾಗತಿಕ ಕಂಪನಿಯೊಂದರ ಕಾರ್ಯನಿರ್ವ ಹಣೆಯಲ್ಲಿ ವ್ಯತ್ಯಯವಾಗಿದೆ ಎಂದು ಕಂಪನಿ ಹೇಳಿ ಕೊಂಡಿದೆ.

ನವದೆಹಲಿ(ಜೂ.28): ಇತ್ತೀಚೆಗಷ್ಟೇ ‘ವಾನ್ನಾಕ್ರೈ' ಸೈಬರ್‌ ದಾಳಿ ಮೂಲಕ ಜಗತ್ತನ್ನೇ ತಲ್ಲಣಗೊಳಿಸಿದ್ದ ದಾಳಿಕೋರರು, ಇದೀಗ ಮತ್ತೆ ಜಗತ್ತಿನಾದ್ಯಂತ ಕಂಪ್ಯೂಟರ್‌ಗಳ ಮೇಲೆ ಸುಲಿಗೆ ದಾಳಿ ನಡೆಸಿದ್ದಾರೆ. ‘ಪೆಟ್ಯಾ' ಹೆಸರಿನಲ್ಲಿ ಮೊದಲಿಗೆ ಉಕ್ರೇನ್‌ನಲ್ಲಿ ವಿಮಾನಯಾನ, ಬ್ಯಾಂಕ್‌, ಸರ್ಕಾರಿ ಕಚೇರಿಗಳ ಮೇಲೆ ಭಾರೀ ಪ್ರಮಾಣದಲ್ಲಿ ಸೈಬರ್‌ ದಾಳಿ ನಡೆಸಲಾಗಿದೆ. ಇದರ ಬೆನ್ನಲ್ಲೇ ಫ್ರಾನ್ಸ್‌ನ ಕಂಪ್ಯೂಟರ್‌ ವ್ಯವಸ್ಥೆಗಳ ಮೇಲೂ ದಾಳಿ ನಡೆದಿದೆ. ಭಾರತದಲ್ಲಿ ಇಂತಹ ಯಾವುದೇ ಭೀತಿಯಿಲ್ಲ ಎಂದು ಸೈಬರ್‌ ಭದ್ರತಾ ಸಂಸ್ಥೆಯ ಮುಖ್ಯಸ್ಥ ಸಂಜಯ್‌ ಬಹ್‌್ಲ ಹೇಳಿದ್ದಾರೆ. ಆದರೆ ಈ ನಡುವೆ ಮುಂಬೈ ಬಂದರಿನಲ್ಲಿ ಜಾಗತಿಕ ಕಂಪನಿಯೊಂದರ ಕಾರ್ಯನಿರ್ವ ಹಣೆಯಲ್ಲಿ ವ್ಯತ್ಯಯವಾಗಿದೆ ಎಂದು ಕಂಪನಿ ಹೇಳಿ ಕೊಂಡಿದೆ.

ಉಕ್ರೇನ್‌, ರಷ್ಯಾ ಸೇರಿದಂತೆ ಕೆಲ ದೇಶಗಳ ಪ್ರಮುಖ ಮೂಲಭೂತ ಸೌಕರ್ಯ ವ್ಯವಸ್ಥೆಯ ಮೇಲೆ ದಾಳಿ ನಡೆದಿದೆ. ಡ್ಯಾನಿಷ್‌ ಶಿಪ್ಪಿಂಗ್‌ ಕಂಪೆನಿ ಮಯೇಸ್ಕ್‌ರ್‍ ಮತ್ತು ಬ್ರಿಟಿಷ್‌ ಜಾಹೀರಾತು ಕಂಪೆನಿ ಡಬ್ಲ್ಯೂಪಿಪಿಯಂತಹ ಬೃಹತ್‌ ಕಂಪೆನಿಗಳೂ ದಾಳಿಗೊಳಗಾಗಿವೆ. ಜಾಗತಿಕ ರಾರ‍ಯನ್ಸಮ್‌ವೇರ್‌ ಘಟನೆಯ ಬಗ್ಗೆ ತಿಳಿದು ಬಂದಿದೆ, ಪರಿಸ್ಥಿತಿಯ ಬಗ್ಗೆ ತೀವ್ರ ನಿಗಾವಿರಿಸಲಾಗಿದೆ ಎಂದು ಬ್ರಿಟಿಷ್‌ ರಾಷ್ಟ್ರೀಯ ಸೈಬರ್‌ ಭದ್ರತಾ ಕೇಂದ್ರ ತಿಳಿಸಿದೆ. ಇದು ಕಳೆದ ಮೇನಲ್ಲಿ ಜಗತ್ತಿನಾದ್ಯಂತ ಹರಡಿದ್ದ ವಾನ್ನಾಕ್ರೈ ದಾಳಿಗಿಂತಲೂ ದೊಡ್ಡ ಮಟ್ಟದ್ದಾಗಿರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ವಾನ್ನಾಕ್ರೈ ಆಸ್ಪತ್ರೆಗಳಿಗೆ ಸಂಬಂಧಿಸಿದ ಕಂಪ್ಯೂಟರ್‌ ವ್ಯವಸ್ಥೆ ಯ ಮೇಲೆ ದಾಳಿ ನಡೆಸಿ, ಆತಂಕ ಸೃಷ್ಟಿಸಿತ್ತು. ಆದರೆ ಇದು ಇತರ ಪ್ರಮುಖ ಅಂತಾರಾಷ್ಟ್ರೀಯ ಕಂಪೆನಿಗಳನ್ನೂ ಗುರಿಯಾಗಿಸಿದೆ. ತಮ್ಮ ಸರ್ವರ್‌ಗಳು ಮತ್ತು ಕೆಲವು ಬ್ಯಾಂಕ್‌ಗಳ ವ್ಯವಸ್ಥೆಯ ಮೇಲೂ ದಾಳಿಗಳು ನಡೆದಿದೆ ಎಂದು ರಷ್ಯಾದ ಪ್ರಮುಖ ತೈಲ ಉತ್ಪಾದನಾ ಸಂಸ್ಥೆ ರೊಸ್ನೆಫ್ಟ್‌ ಹೇಳಿದೆ. ಹಲವು ಅಂತಾರಾಷ್ಟ್ರೀಯ ಕಂಪೆನಿಗಳು ತಮ್ಮ ವ್ಯವಸ್ಥೆಗಳಿಗೆ ಸೈಬರ್‌ ದಾಳಿ ನಡೆದಿರುವುದನ್ನು ಖಚಿತ ಪಡಿಸಿವೆ. ಅಮೆರಿಕ ಮತ್ತು ಯುರೋಪಿಯನ್‌ ರಾಷ್ಟ್ರಗಳ ಲ್ಲೂ ಸೈಬರ್‌ ದಾಳಿ ನಡೆದಿರುವುದು ವರದಿಯಾಗಿವೆ.

 

click me!