ಭಾರತದ ಗಡಿಗೆ ಚೀನಾ ಸೇನಾ ಪಡೆ; ಪಾಕ್ ಮೂಲಕ ಭಾರತದ ಮೇಲೆ ಚೀನಾ ಅಣ್ವಸ್ತ್ರ ದಾಳಿ?

Published : Jul 20, 2017, 07:51 AM ISTUpdated : Apr 11, 2018, 01:04 PM IST
ಭಾರತದ ಗಡಿಗೆ ಚೀನಾ ಸೇನಾ ಪಡೆ; ಪಾಕ್ ಮೂಲಕ ಭಾರತದ ಮೇಲೆ ಚೀನಾ ಅಣ್ವಸ್ತ್ರ ದಾಳಿ?

ಸಾರಾಂಶ

* ಭಾರತದ ಗಡಿಗೆ ಚೀನಾ ಸೇನಾಪಡೆ; ಭಾರೀ ಶಸ್ತ್ರಾಸ್ತ್ರ, ಯುದ್ಧವಾಹನ ರವಾನೆ: ಚೀನಾ ಪತ್ರಿಕೆ * ಸೇನಾ ಜಮಾವಣೆ ಆಗಿಲ್ಲ: ಕೇಂದ್ರ ಸರ್ಕಾರಿ ಮೂಲಗಳು * ಪಾಕಿಸ್ತಾನದ ನೆಲದಲ್ಲಿ ಅಣ್ವಸ್ತ್ರಗಳನ್ನು ಹೂತಿಟ್ಟಿರುವ ಚೀನಾ: ಮುಲಾಯಂ ಕಳವಳ

ಬೀಜಿಂಗ್: ಭಾರತಕ್ಕೆ ಹೊಂದಿಕೊಂಡ ಗಡಿ ಪ್ರದೇಶದ ಸಮೀಪದಲ್ಲಿ ಇತ್ತೀಚೆಗಷ್ಟೇ ಹೊವಿಟ್ಜರ್ ಗನ್ ಮತ್ತು ಲಘು ಟ್ಯಾಂಕರ್‌ಗಳನ್ನು ಬಳಸಿ ಅಭ್ಯಾಸ ನಡೆಸಿದ್ದ ಚೀನಾ, ಇದೀಗ ಟಿಬೆಟ್ ಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಸೈನಿಕರು ಹಾಗೂ ಸೇನಾ ಸಲಕರಣೆಗಳ ಜಮಾವಣೆ ಮಾಡತೊಡಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಉತ್ತರ ಟಿಬೆಟ್‌'ನ ಕುನ್ಲುನ್ ಪರ್ವತಶ್ರೇಣಿಯ ದಕ್ಷಿಣ ಭಾಗದಲ್ಲಿ ಸೇನಾ ಸಲಕರಣೆಗಳನ್ನು ಕಳೆದ ತಿಂಗಳೇ ಜಮಾವಣೆ ಮಾಡಲಾಗಿದೆ. ರಸ್ತೆ ಮತ್ತು ರೈಲು ಮೂಲಕ ಕೋಟ್ಯಂತರ ಟನ್‌'ಗಟ್ಟಲೆ ಸೇನೆ, ಸೇನಾ ವಾಹನಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಸಾಗಿಸಲಾಗಿದೆ. ಭಾರತದ ಗಡಿ ವ್ಯವಹಾರಗಳನ್ನು ನೋಡಿಕೊಳ್ಳುವ ಚೀನಾ ಸೇನೆಯ ಪಶ್ಚಿಮ ಕಮಾಂಡ್ ಇದರ ಮೇಲುಸ್ತುವಾರಿ ವಹಿಸಿದೆ ಎಂದು ಚೀನಾ ಸೇನೆಯ ಮುಖವಾಣಿಯಾಗಿರುವ ‘ಪಿಎಲ್‌ಎ’ ಪತ್ರಿಕೆ ವರದಿ ಮಾಡಿದೆ.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರದ ಉನ್ನತ ಮೂಲಗಳು, ಚೀನಾ ಭಾರೀ ಪ್ರಮಾಣದಲ್ಲಿ ಸೇನಾ ಜಮಾವಣೆ ಮಾಡಿಲ್ಲ. ಅಲ್ಲದೆ, ಇತ್ತೀಚೆಗೆ ಟಿಬೆಟ್ ಪ್ರದೇಶದಲ್ಲಿ ಚೀನಾ ನಡೆಸಿದ ಸಮರಾಭ್ಯಾಸವು ಅದರ ಸಾಮಾನ್ಯ ತಾಲೀಮು. ಇದಕ್ಕೂ ಇತ್ತೀಚಿನ ಸಿಕ್ಕಿಂ ಗಡಿ ವಿವಾದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿವೆ.

ಚೀನಾ ಅಣುಬಾಂಬ್
ನಮಗೆ ಪಾಕಿಸ್ತಾನಕ್ಕಿಂತ, ಚೀನಾ ಹೆಚ್ಚು ಅಪಾಯಕಾರಿ ದೇಶ. ಇದೀಗ ಪಾಕಿಸ್ತಾನದ ಜೊತೆಗೂಡಿ, ಚೀನಾ ಭಾರತದ ಮೇಲೆ ಯುದ್ಧಕ್ಕೆ ಸಜ್ಜಾಗಿ ನಿಂತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಸೈನಿಕರ ಜೊತೆ ಚೀನಾ ಸೈನಿಕರು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತದ ಮೇಲೆ ದಾಳಿಗೆಂದೇ ಪಾಕಿಸ್ತಾನದ ನೆಲದಲ್ಲಿ, ಚೀನಾ ಅಣ್ವಸ್ತ್ರಗಳನ್ನು ಹೂತಿಟ್ಟಿದೆ. ಈ ಬಗ್ಗೆ ನನಗಿಂತ ಗುಪ್ತಚರ ಪಡೆಗಳಿಗೇ ಹೆಚ್ಚಿನ ಮಾಹಿತಿ ಇದೆ. ಇಂಥ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಏನು ಸಿದ್ಧತೆ ಮಾಡಿಕೊಂಡಿದೆ?
- ಮುಲಾಯಂ ಸಿಂಗ್ ಯಾದವ್, ಎಸ್‌ಪಿ ನಾಯಕ

ಬೆದರಿಕೆ ತಂತ್ರ: ಅತ್ತ ವಿವಾದಿತ ಭೂಪ್ರದೇಶವಾದ ಡೋಕ್ಲಾಮ್‌'ನಲ್ಲಿ ಭಾರತೀಯ ಸೇನೆ ಬೀಡು ಬಿಟ್ಟಿದ್ದು, ಚೀನಾ ಆಗ್ರಹಿಸಿದರೂ ಕದಲುತ್ತಿಲ್ಲ. ಹೀಗಾಗಿ ಭಾರತವನ್ನು ಬೆದರಿಸಲು ಚೀನಾ ಈ ಕ್ರಮಕ್ಕೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಇನ್ನು ಶಾಂಘೈ ಮೂಲದ ಸೇನಾ ವಿಶ್ಲೇಷಕ ನಿ ಲೆಕ್ಸಿಯಾಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಭಾರತವನ್ನು ಬೆದರಿಸಿ ಮಾತುಕತೆಯ ಹಾದಿ ತುಳಿಯವಂತೆ ಮಾಡಲು ಸೇನಾ ಜಮಾವಣೆ ಹಾಗೂ ಸೇನಾ ಸಲಕರಣೆಗಳ ಜವಾವಣೆ ತಂತ್ರವನ್ನು ಚೀನಾ ಅನುಸರಿಸುತ್ತಿರಬಹುದು. ರಾಜತಾಂತ್ರಿಕ ಮಾತುಕತೆಗಳಿಗೆ ಯಾವತ್ತೂ ಸೇನಾ ಸಿದ್ಧತೆ ಬೇಕಾಗುತ್ತದೆ’ ಎಂದಿದ್ದಾರೆ.

ಈಗಾಗಲೇ ಟಿಬೆಟ್‌'ನಲ್ಲಿ ಚೀನಾ ಸಮರಾಭ್ಯಾಸ ನಡೆಸುತ್ತಿದೆ. ಆದರೆ ಸೇನಾ ಸಲಕರಣೆಗಳ ಜಮಾವಣೆಯು ಸಮರಾಭ್ಯಾಸಕ್ಕೆ ಸಂಬಂಧಿಸಿದ್ದೇ ಎಂಬ ಮಾಹಿತಿ ಲಭ್ಯವಾಗಿಲ್ಲ.

ಅಮೆರಿಕ ಕಳವಳ: ಈ ನಡುವೆ ಡೋಕ್ಲಾಮ್ ವಿಷಯ ಸಂಬಂಧ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಶೀಘ್ರವೇ ಉಭಯ ರಾಷ್ಟ್ರಗಳು ವಿವಾದವನ್ನು ಸೌಹಾರ್ಧಯುತವಾಗಿ ಇತ್ಯರ್ಥಪಡಿಸಿಕೊಳ್ಳುವ ವಿಶ್ವಾಸ ಇದೆ ಎಂದು ಅದು ಆಶಿಸಿದೆ.

epaperkannadaprabha.com

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಬಕಾರಿ ಭ್ರಷ್ಟಾಚಾರ: ಲೋಕಾಯುಕ್ತದಿಂದ ಜೈಲು ಸೇರಿರುವ ಅಧಿಕಾರಿಗಳ ಬ್ಯಾಂಕ್ ಖಾತೆ ಪರಿಶೀಲನೆ, ಹೆಚ್ಚು ನಗದು ಹಣ ಪಡೆದಿರೋ ಶಂಕೆ
ಶಿಡ್ಲಘಟ್ಟ ಪೌರಾಯುಕ್ತೆ ಆಯ್ತು, ಈಗ ಸಿಎಂ ತವರಲ್ಲೇ ಮಹಿಳಾ ಅಧಿಕಾರಿ ತಲೆ ತೆಗೆಯುತ್ತೇನೆಂದ ಕಿಡಿಗೇಡಿಗಳು!