
ಬೆಂಗಳೂರು(ಎ.05): ಗೆಳೆಯನ ಜೊತೆಗಿನ ಜಗಳದಿಂದ ನೊಂದಿದ್ದ ಬಿಗ್ ಬಾಸ್ ಪ್ರಥಮ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಲ್ಲದೆ, ಫೇಸ್'ಬುಕ್ ಲೈವ್ ಚಾಟ್'ನಲ್ಲೂ ತನ್ನ ನೋವು ತೋಡಿಕೊಂಡಿದ್ದರು. ಪ್ರಥಮ್ ಆತ್ಮಹತ್ಯೆಗೆ ಯತ್ನಿಸಿದ್ದು, ರಾಜ್ಯಾದ್ಯಂತ ಸುದ್ದಿಯಾಗಿತ್ತು. ಪ್ರಥಮ್ ನಡೆಯ ಬಗ್ಗೆ ಪರ ವಿರೋಧಗಳೂ ವ್ಯಕ್ತವಾಗಿದ್ದವು. ಸದ್ಯ ಈ ಕುರಿತಾಗಿ ಹುಚ್ಚ ವೆಂಕಟ್ ಪ್ರತಿಕ್ರಿಯೆ ನೀಡಿದ್ದು 'ಒಳ್ಳೆ ಹುಡುಗ'ನಿಗೆ ಕೆಲವೊಂದು ಬುದ್ದಿ ಮಾತುಗಳನ್ನು ಹೇಳಿದ್ದಾರೆ
'ಪ್ರಥಮ್ ಮಾಡಿದ್ದು ನಿಜಕ್ಕೂ ದಸರಿಯಲ್ಲ. ಆತ ಜೀವನದಲ್ಲಿ ಸೋತಿಲ್ಲ, ಬದಲಾಗಿ ಗೆದ್ದಿದ್ದಾನೆ. ನಾನು ಸೋತಾಗಲೂ ಆತ್ಮಹತ್ಯೆಗೆ ಯತ್ನಿಸಿರಲಿಲ್ಲ. ಹುಚ್ಚ ವೆಂಕಟ್ ಸಿನಿಮಾ ಸೋತಾಗ ನಾನೂ ಆತ್ಮಹತ್ಯೆ ಮಾಡಬೇಕಂತ ಅಂದುಕೊಂಡಿದ್ದೆ ಆದರೆ ಸೋಲೇ ಜೀವನವಲ್ಲ. ಅದರಲ್ಲೂ ಗೆದ್ದವರು ಈ ರೀತಿ ಮಾಡಿದರೆ ಮುಟ್ಟಾಳತನ ಎಂದು ಹೇಳಬೇಕಷ್ಟೇ. ಯಾಕೆಂದರೆ ಗೆದ್ದಾಗ ಜವಾಬ್ದಾರಿ ಜಾಸ್ತಿ ಆಗುತ್ತದೆ. ಜನರು ಅವರನ್ನು ಪ್ರೀತಿಸಿದ್ದಾರೆ, ಅವರಿಗೆ ನಾವು ಮಾರ್ಗದರ್ಶಿಗಳಾಗಬೇಕು. ಅವರಿಂದ ಹೆಸರು ಮಾಡಿಕೊಂಡು ಅವರನ್ನು ಮರೆಯಬಾರದು. ವ್ಯಕ್ತಿಯೊಬ್ಬ ಎಲ್ಲರನ್ನೂ ತೃಪ್ತಿಪಡಿಸಲು ಆಗಲ್ಲ, ಆದ್ರೆ ಪ್ರೀತಿಸುವವರನ್ನು ತೃಪ್ತಿಪಡಿಸಬೇಕು. ಜೀವನದಲ್ಲಿ ಹೊಗಳಿಕೆ ಇದ್ದರೆ ತೆಗಳುವವರೂ ಇರುತ್ತಾರೆ. ಹೀಗಾಗಿ ಸಣ್ಣ ಪುಟ್ಟ ವಿಚಾರಗಳಿಗೆ ಹೀಗೆ ಸೂಸೈಡ್ ಮಾಡಿಕೊಳ್ಳುತ್ತೇನೆ ಎನ್ನುವುದು ತಪ್ಪು. ಪ್ರಥಮ್ ವಯಸ್ಸು ಇನ್ನೂ ಚಿಕ್ಕದು, ಸಾಧಿಸುವುದು ಬಹಳ ಇದೆ. ಯಾರೋ ಫ್ರೆಂಡ್ ಏನೋ ಹೇಳಿದನೆಂದು ಹೀಗೆಡ ಮಾಡುವುದು ತಪ್ಪು. ಜನ್ಮ ಕೊಟ್ಟ ತಂದೆ ತಾಯಿ, ಕಟ್ಟಿಕೊಂಡ ಹೆಂಡತಿ ಅದು ಬಿಟ್ರೆ ಬೇರೆ ಯಾವ ಸಂಬಂಧಗಳು ಉಳಿಯುವುದಿಲ್ಲ. ಅವರಿಗಾಗಿ ಪಗ್ರಣ ಕೊಟ್ರೆ ಅರ್ಥ ಇರುತ್ತೆ, ಆದರೆ ಗೆಳೆಯನ ಜೊತೆ ಜಗಳವಾಯಿತೆಂದು ಜೀವ ಕೊಟ್ಟರೆ ಅದು ಮೂರ್ಖತನ. ಪ್ರಥಮ್ ಇಷ್ಟು ದುರ್ಬಲ ಮನಸ್ಸಿನವನು ಅಂತ ಅಂದುಕೊಂಡಿರಲಿಲ್ಲ. ಬಿಗ್ ಬಾಸ್'ನಲ್ಲೂ ಎಲ್ಲರನ್ನೂ ಎದುರಿಸಿದ್ದಿ, ಆಗಲೂ ನಿನಗೆ ಎಲ್ಲರೂ ಬೈದಿದ್ದರು ಆಗ ಅಷ್ಟು ಧೈರ್ಯದಿಂದ ಇದ್ದವನು ಈಗ ಯಾಕೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದಿ? ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಬೇಡ ಅಪ್ಪ ಅಮ್ಮನ ಮಾತಿಗಷ್ಟೇ ಬೆಲೆ ಕೊಡು- ಹುಚ್ಚ ವೆಂಕಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.