ಪೊಲೀಸ್ ಠಾಣೆಯಲ್ಲೇ ಸಿಪಿಐ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್

Published : Nov 02, 2016, 04:12 PM ISTUpdated : Apr 11, 2018, 01:05 PM IST
ಪೊಲೀಸ್ ಠಾಣೆಯಲ್ಲೇ ಸಿಪಿಐ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್

ಸಾರಾಂಶ

ರೌಡಿ ಶೀಟರ್ ಶಿವಕುಮಾರ್  ಸಹಚರ ರಾಜಾ ಪಾಟೀಲ್ ಎಂಬುವವನ್ನು ನಿನ್ನೆ ರಾತ್ರಿ ಹಣಕಾಸು ಪ್ರಕರಣ ಸಂಬಂಧ ಬಂಧಿಸಿ ಕೇಶ್ವಪುರ ಪೋಲೀಸರು ಠಾಣೆಗೆ ಕರೆತಂದಿದ್ದರು.

ಹುಬ್ಬಳ್ಳಿ(ನ.2): ರೌಡಿಶೀಟರೊಬ್ಬ ಠಾಣೆಯಲ್ಲೇ ಸರ್ಕಲ್ ಇನ್ಸ್‌ಪೆಕ್ಟರ್ ಗೆ ಧಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಹುಬ್ಬಳ್ಳಿ ಕೇಶ್ವಾಪುರ ಸರ್ಕಲ್  ಇನ್ಸ್‌ಪೆಕ್ಟರ್ ಶ್ಯಾಮರಾವ್ ಸಜ್ಜನ್ ಮೇಲೆ. ರೌಡಿಶೀಟರ್ ಶಿವಕುಮಾರ್ ಸುಬ್ರಹ್ಮಣ್ಯ ಎಂಬುವನಿಂದ ಹಲ್ಲೆಗೆ ಯತ್ನ ನಡೆದಿದೆ. ರೌಡಿ ಶೀಟರ್ ಶಿವಕುಮಾರ್  ಸಹಚರ ರಾಜಾ ಪಾಟೀಲ್ ಎಂಬುವವನ್ನು ನಿನ್ನೆ ರಾತ್ರಿ ಹಣಕಾಸು ಪ್ರಕರಣ ಸಂಬಂಧ ಬಂಧಿಸಿ ಕೇಶ್ವಪುರ ಪೋಲೀಸರು  ಠಾಣೆಗೆ ಕರೆತಂದಿದ್ದರು.ಈ ವೇಳೆ ಠಾಣೆಗೆ ನುಗ್ಗಿ ರೌಡಿ ಶೀಟರ್ ಶಿವಕುಮಾರ್ ತನ್ನ ಸಹಚರ ರಾಜಾ ಪಾಟೀಲ್ ವಿಚಾರಣೆಗೆ ಅಡ್ಡಿಪಡಿಸಿ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಗೆ ಯತ್ನಿಸಿದ್ದಾನೆ. ಸಾಲದ್ದಕ್ಕೆ ನಾನು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಬೆಂಬಲಿಗ ಎಂದು ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿ ಬೆದರಿಕೆ ಒಡ್ಡಿದ್ದಾನೆ.ಈ ವೇಳೆ ರೌಡಿ ಶೀಟರ್ ಶಿವಕುಮಾರನನ್ನು ಕೇಶ್ಬಾಪುರ ಪೊಲೀಸರು ಬಂಧಿಸಿದ್ದಾರೆ. ಸದ್ಯಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿದ ಆರೋಪದ ಪ್ರಕರಣ ದಾಖಲಿಸಿದ್ದು ಆರೋಪಿ ಶಿವಕುಮಾರನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಕ್ಕಳಲ್ಲವೇ.. ಮಕ್ಕಳಿಂದ ತಪ್ಪಾಗುತ್ತೆ ಅವರನ್ನು ಕೋರ್ಟು ಕಚೇರಿ ಅಲಿಸೋದು ಬೇಡ! ಭಾವುಕ ಕರೆ ಕೊಟ್ಟ ಮೋದಿ!
Bank Holidays August: ಆಗಸ್ಟ್‌ನಲ್ಲಿ 14 ದಿನ ಬ್ಯಾಂಕ್‌ ಬಂದ್‌, ಹಣಕಾಸು ಕೆಲಸಕ್ಕೂ ಮುನ್ನ ರಜಾ ದಿನಗಳ ಪಟ್ಟಿ ನೋಡಿ