
ಹುಬ್ಬಳ್ಳಿ: ಬ್ಯಾಂಕುಗಳಿಗೆ ಸಾವಿರಾರು ಕೋಟಿ ಹಣವನ್ನು ಬಾಕಿಯಿಟ್ಟು ವಿದೇಶದಲ್ಲಿ ತಲೆ ಮರಿಸಿಕೊಂಡಿರುವ ಉದ್ಯಮಿ ವಿಜಯ ಮಲ್ಯಗೆ ಸೇರಿದ ಒಂದೊಂದೇ ಆಸ್ತಿಯನ್ನು ಹರಾಜು ಹಾಕಲಾಗುತ್ತಿದೆ. ಆದರೆ, ಮಲ್ಯ ಆಸ್ತಿ ಹರಾಜಿನಲ್ಲಿ ಭಾಗಿಯಾದೋನು ಲಕ್ಕಿ; ಅದರಲ್ಲೂ ಹುಬ್ಬಳ್ಳಿಯ ಉದ್ಯಮಿಯೊಬ್ಬರಿಗೆ ಬಂಪರ್ ಲಕ್ ಖುಲಾಯಿಸಿದೆ!
ಮಲ್ಯ ಆಸ್ತಿ ಹರಾಜಿನಲ್ಲಿ ಹುಬ್ಬಳ್ಳಿಯ ಉದ್ಯಮಿ ಹನುಮಂತ ರೆಡ್ಡಿ ಎಂಬವರಿಗೆ ಬಂಪರ್ ಆಫರ್ ಸಿಕ್ಕಿದೆ. ವಿಜಯ್ ಮಲ್ಯ ಒಡೆತನದ ಯುಬಿ ಗ್ರೂಪ್'ಗೆ ಸೇರಿರುವ ಎರಡು ಕಾರುಗಳನ್ನು ಕಳೆದ ಜನವರಿಯಲ್ಲಿ ಮುಂಬೈಯಲ್ಲಿ ಆನ್‌ಲೈನ್ ಮೂಲಕ ಹರಾಜು ಹಾಕಲಾಗಿತ್ತು. ರೂ. ೧೩.೧೫ಲಕ್ಷದ ಹುಂಡೈ ಸೋನಾಟಾ ಗೋಲ್ಡ್ ಹಾಗೂ ರೂ. ೨೧ ಲಕ್ಷಕ್ಕೂ ಅಧಿಕ ಮೌಲ್ಯದ ಹೊಂಡಾ ಎಕಾರ್ಡ್ ಕಾರನ್ನು ಕೇವಲ ರೂ.೧.೪೦ಲಕ್ಷಕ್ಕೆ ಖರೀದಿಸಿದ್ದಾರೆ. ಮೂಲ ಬೆಲೆಯ ಪ್ರಕಾರ ಎರಡೂ ಕಾರುಗಳ ಅಂದಾಜು ಬೆಲೆ ರೂ.೩೨ ಲಕ್ಷ. ಆದ್ರೆ, ಆನ್‌ಲೈನ್ ಹರಾಜಿನಲ್ಲಿ ಹನುಮಂತ ರೆಡ್ಡಿ ಕೇವಲ ರೂ.೧.೪೦ ಲಕ್ಷಕ್ಕೆ ತಮ್ಮದಾಗಿಸಿಕೊಂಡಿದ್ದಾರೆ.
ರೆಡ್ಡಿಗೆ ಹುಂಡೈ ಸೋನಾಟಾ ಕಾರು ಕೇವಲ ರೂ. ೪೦ ಸಾವಿರಕ್ಕೆ ದೊರಕಿದರೆ, ಹೊಂಡಾ ಎಕಾರ್ಡ್ ಕಾರು ಕೇವಲ ೧ ಲಕ್ಷಕ್ಕೆ ದೊರಕಿದೆ. ವ್ಯಾಟ್ ಸೇರಿ ಒಟ್ಟು ೧,೫೮,೯೦೦ ಹಣ ನೀಡಿ ಎರಡು ಕಾರುಗಳನ್ನು ಖರೀದಿಸಿದ್ದಾರೆ. ಕಾರು ಹಳೆಯದಾದರೂ, ಕಾರುಗಳ ಲುಕ್ ಬದಲಾಗಿಲ್ಲ. ಕಂಡೀಷನ್ ಕೂಡ ಚೆನ್ನಾಗಿವೆ.
ಒಟ್ಟು ಮಲ್ಯ ಒಡೆತನದ ೫೨ ವಾಹನಗಳನ್ನ ಹರಾಜುಹಾಕಲಾಗಿದ್ದು, ಅದರಿಂದ ಬಂದ ಹಣದಲ್ಲಿ ಸಾಲ ತುಂಬಿಕೊಳ್ಳಲಾಗುತ್ತಿದೆ. ಇದು ಮಲ್ಯಗೆ ಬೇಸರ ತರಿಸಿದ್ದರೂ. ಕಡಿಮೆ ಹಣದಲ್ಲಿ ವಾಹನ ಪಡೆದವರು ಫುಲ್ ಖುಷ್ ಆಗಿದ್ದಾರೆ.
ವರದಿ: ಹುಬ್ಬಳ್ಳಿಯಿಂದ ಗುರುರಾಜ ಹೂಗಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.