ಮತ್ತೆ ಸುದ್ದಿಯಲ್ಲಿ ವಿಜಯಾನಂದ ಕಾಶಪ್ಪನವರ; ಶಾಸಕರಿಂದ ಹಿಟ್ ಅ್ಯಂಡ್ ರನ್?

Published : Aug 27, 2017, 08:01 AM ISTUpdated : Apr 11, 2018, 01:11 PM IST
ಮತ್ತೆ ಸುದ್ದಿಯಲ್ಲಿ ವಿಜಯಾನಂದ ಕಾಶಪ್ಪನವರ; ಶಾಸಕರಿಂದ ಹಿಟ್ ಅ್ಯಂಡ್ ರನ್?

ಸಾರಾಂಶ

ಸದಾ ಒಂದಲ್ಲಾ ಒಂದು ಎಡವಟ್ಟು ಮೂಲಕ ಸುದ್ದಿಯಲ್ಲಿರುವ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ, ಈಗ  ಮತ್ತೆ ಒಂದು ಕಿರಿಕ್ ಮಾಡಿಕೊಂಡಿದ್ದಾರೆ. ಈಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಶಾಕರು ಮಾಡಿದ ಘನಾಂದಾರಿ ಕೆಲಸಕ್ಕೆ ಸ್ಥಳೀಯರೇ ಶಾಸಕರ ಮೈಚಳಿ ಬಿಡಿಸಿದ್ದಾರೆ.

ಚಿಕ್ಕಮಗಳೂರು: ಸದಾ ಒಂದಲ್ಲಾ ಒಂದು ಎಡವಟ್ಟು ಮೂಲಕ ಸುದ್ದಿಯಲ್ಲಿರುವ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ, ಈಗ  ಮತ್ತೆ ಒಂದು ಕಿರಿಕ್ ಮಾಡಿಕೊಂಡಿದ್ದಾರೆ. ಈಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಶಾಕರು ಮಾಡಿದ ಘನಾಂದಾರಿ ಕೆಲಸಕ್ಕೆ ಸ್ಥಳೀಯರೇ ಶಾಸಕರ ಮೈಚಳಿ ಬಿಡಿಸಿದ್ದಾರೆ.

ಸ್ಕೈ ಬಾರ್ ಗಲಾಟೆ ಬಳಿಕ ಮತ್ತೊಮ್ಮೆ ಹುನಗುಂದ ಶಾಸಕ ಕಾಶಪ್ಪನವರ್ ಈ ಬಾರಿ ಸುದ್ದಿಯಾಗಿದ್ದು ಹಿಟ್ ಅಂಡ್ ರನ್ ವಿಚಾರದಲ್ಲಿ. ಹೌದು ಶಾಸಕರು ಢಿಕ್ಕಿ  ಹೊಡೆದು ಪರಾರಿಯಾಗಿ ಮತ್ತೆ ಸುದ್ದಿಯಾಗಿದ್ದಾರೆ.

ನಿನ್ನೆ  ಶಾಸಕ ವಿಜಯಾನಂದ ಎಸ್ ಕಾಶಪ್ಪನವರ್ ಚಿಕ್ಕಮಗಳೂರು ಜಿಲ್ಲೆಯಿಂದ ಮಂಗಳೂರು ಕಡೆಗೆ  ಹೊರಟಿದ್ದರು..  ಈ ವೇಳೆ  ಮೂಡಿಗೆರೆಯ ಕಬ್ಬಿಣ ಸೇತುವೆ ಬಳಿ ಬೈಕ್ ಸವಾರನೊಬ್ಬನಿಗೆ ಶಾಸಕರ ಕಾರು ಡಿಕ್ಕಿ ಹೊಡೆದಿದೆ. ಆದರೆ ಯಾರದು ತಪ್ಪೋ ಏನೊ, ಆದರೆ ಶಾಸಕರು ಮಾತ್ರ ಢಿಕ್ಕಿ ಹೊಡೆದರೂ ಕಾರು ನಿಲ್ಲಿಸದೇ ಪರಾರಿಯಾಗಿದ್ದಾರೆ ಎಂಬುವುದು ಆರೋಪ.

ಆದರೆ ಪರಾರಿಯಾಗುತ್ತಿದ್ದ ಶಾಸಕರನ್ನು  ಜನ ಮಾತ್ರ ಬಿಡಲಿಲ್ಲ. ಸ್ಥಳೀಯರು ಶಾಸಕರ ಕಾರ್ ಚೇಸ್ ಮಾಡಿ ಮೂಡಿಗೆರೆ ಸಮೀಪದ ಬಿಲಕಗುಳದ ಬಳಿ ತಡೆದು ನಿಲ್ಲಿಸಿದ್ದಾರೆ. ಆದರೆ, ಆಗಲೂ ಶಾಸಕರು ಸಮಾಧಾನದ ಉತ್ತರ ಕೊಡದೇ ನೇರವಾಗಿ ವಾಗ್ವಾದಕ್ಕೆ ಇಳಿದಿದ್ದಾರಂತೆ.

ಕೊನೆಗೆ ಸ್ಥಳೀಯರು ಗಲಾಟೆ ಮಾಡಿದ ಬಳಿಕ, ಶಾಸಕರು ಅಪಘಾತದಲ್ಲಿ ಆಸ್ಪತ್ರೆ ಸೇರಿದ ಬೈಕ್ ಸವಾರನ  ಆರೋಗ್ಯ ವಿಚಾರಿಸಿದ್ದಾರೆ. ಅಲ್ಲೂ ಕೂಡ ಶಾಸಕರು ಸ್ಥಳೀಯರ ಜೊತೆ ವಾಗ್ವಾದಕ್ಕಿಳಿದರು. ಬಳಿಕ ಜಾಗ ಖಾಲಿ ಮಾಡಿದ್ದಾರೆ. ಒಟ್ಟಿನಲ್ಲಿ 2014ರಲ್ಲಿ  ವಿಠಲ್ ಮಲ್ಯ ರಸ್ತೆಯಲ್ಲಿರುವ ಯು.ಬಿ.ಸಿಟಿ ಸ್ಕೈ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ  ಪೇದೆಗಳ  ಕೆನ್ನೆಗೆ ಹೊಡೆದ್ದು ದರ್ಪ  ತೋರಿದ್ದ ಶಾಸಕರು ಮತ್ತೆ ಗೂಂಡಾ ವರ್ತನೆ ತೋರಿದ್ದಾರೆ ಎನ್ನಲಾಗ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌