21ನೇ ಶತಮಾನದ ವಿಶೇಷ ಗ್ರಹಣ : ಹೇಗೆ ನೋಡಬಹುದು..?

By Web DeskFirst Published Jul 27, 2018, 7:42 AM IST
Highlights

21ನೇ ಶತಮಾನದ ಈ ವಿಶೇಷ ಚಂದ್ರಗ್ರಹಣವು ಅತ್ಯಂತ ಸುದೀರ್ಘವಾದುದಾಗಿದೆ. ಈ ಗ್ರಣವನ್ನು ನೀವು ಹೇಗೆ ನೋಡಬೇಕು ಎನ್ನುವ ಮಾಹಿತಿ ಇಲ್ಲಿದೆ. 

ನವದೆಹಲಿ: ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರ ಗ್ರಹಣ ಅಥವಾ ಬ್ಲಡ್ ಮೂನ್ ಶುಕ್ರವಾರ ರಾತ್ರಿ ಸಂಭವಿಸಲಿದೆ. ರಾತ್ರಿ 11:44 ನಿಮಿಷಕ್ಕೆ ಗ್ರಹಣ ಆರಂಭವಾಗಲಿದ್ದು, ಮುಂಜಾನೆ 3.49ರ ವರೆಗೂ ಗೋಚರಿಸಲಿದೆ.

ರಾತ್ರಿ 1 ಗಂಟೆಗೆ ಬ್ಲಡ್ ಮೂನ್ ಆರಂಭವಾಗಲಿದ್ದು, 2 ಗಂಟೆ 43 ನಿಮಿಷದವರೆಗೆ ವೀಕ್ಷಿಸಬಹುದು. ಭಾರತ ಸೇರಿದಂತೆ ಏಷ್ಯಾದ ಬಹುತೇಕ ಭಾಗ, ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್, ಮತ್ತು ದಕ್ಷಿಣ ಅಮೆರಿಕದಲ್ಲಿ ಬ್ಲಡ್ ಮೂನ್ ಗೋಚರಿಸಲಿದೆ. 21ನೇ ಶತಮಾನದ ಅತಿ ಸುದೀರ್ಘ ಖಗ್ರಾಸ ಚಂದ್ರ ಗ್ರಹಣ ಇದಾಗಿದೆ. ಇನ್ನು 104 ವರ್ಷಗಳ ಬಳಿಕ ಅಂದರೆ, 2123 ರಲ್ಲಿ ಈ ವಿದ್ಯಮಾನ ಘಟಿಸಲಿದೆ. 

ಬರಿಗಣ್ಣಿನಲ್ಲಿ ನೋಡಿ

ಸೂರ್ಯಗ್ರಹಣದಂತೆ ಚಂದ್ರಗ್ರಹಣ ತೀಕ್ಷ್ಣ ವಾಗಿರುವುದಿಲ್ಲ. ಹೀಗಾಗಿ ಚಂದ್ರಗ್ರಹಣ ವನ್ನು ಯಾವುದೇ ವಿಶೇಷ ಕನ್ನಡಕ, ಎಕ್ಸ್‌ರೇ ಶೀಟ್ ನೆರವಿಲ್ಲದೆ ಬರಿಗಣ್ಣಿನಲ್ಲೇ ನೋಡಬಹುದು. ಯಾವುದೇ ಹಾನಿಯಾಗುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಗ್ರಹಣ ವೇಳೆ ವಿಶೇಷಪೂಜೆ

ಗ್ರಹಣ ವೇಳೆ ದೇಗುಲಗಳು ಬಂದ್ ಆಗಿರುತ್ತವೆ. ಆದರೆ ಶೃಂಗೇರಿ, ಮಂತ್ರಾಲಯ,ಕಟೀಲು, ಕೊಲ್ಲೂರು, ಗಾಣಗಾಪುರ, ಇಡಗುಂಜಿ ದೇಗುಲಗಳಲ್ಲಿ ವಿಶೇಷ ಪೂಜೆ ಇದೆ. 

click me!