ಮಣಿಪಾಲ ವೈದ್ಯರಿಂದ ಹೊಸ ಮಾದರಿ ರಕ್ತದ ಗುಂಪು ಪತ್ತೆ

By Web DeskFirst Published Jul 27, 2018, 7:24 AM IST
Highlights

ಹೊಸ ಮಾದರಿ ರಕ್ತದ ಗುಂಪೊಂದನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರು ಮೊದಲ ಬಾರಿ ಪತ್ತೆ ಮಾಡಿದ್ದಾರೆ. 

ಮಣಿಪಾಲ :ವಿಶ್ವದಲ್ಲಿಯೇ ಅತ್ಯಂತ ಅಪರೂಪ ರಕ್ತದ ಗುಂಪೊಂದನ್ನು ಇಲ್ಲಿನ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಭಾರತದಲ್ಲಿ ಪ್ರಥಮ ಬಾರಿಗೆ ಪತ್ತೆ ಮಾಡಿದ್ದಾರೆ. 

ಇದನ್ನು ಪಿಪಿ ಅತಥಾ ಪಿ ನಲ್ ಎಂದು ಗುರುತಿಸಲಾಗಿದೆ. ಇದು ಸಾವಿರದಲ್ಲಿ ಒಬ್ಬ ವ್ಯಕ್ತಿಗಿಂತೂ ಕಡಿಮೆ ಜನರಲ್ಲಿ ಕಂಡು ಬರುತ್ತದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯಬ್ಬರ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಿದಾಗ, ಆಸ್ಪತ್ರೆಯ ರಕ್ತ ತಂತ್ರಜ್ಞರಿಗೆ ಇದು ಯಾವ ಗುಂಪಿನ ರಕ್ತ ಎಂಬುದನ್ನು ಪತ್ತೆ ಮಾಡುವುದಕ್ಕೆ ಸಾದ್ಯವಾಗಲಿಲ್ಲ. 

ಆಸ್ಪತ್ರೆಯ ರಕ್ತನಿಧಿಯ ವೈದ್ಯಾಧಿಕಾರಿ ಡಾ.ಶಮಿ ಶಾಸ್ತ್ರೀ ಮತ್ತು ತಂಡದವರು ಸುಮಾರು 80ಕ್ಕೂ ಅಧಿಕ ರಕ್ತದ ಮಾದರಿಗಳೊಂದಿಗೆ ಈ ರೋಗಿಯ ರಕ್ತದ ಮಾದರಿಯನ್ನು ಹೋಲಿಸಿದರೂ ಅದು ತಾಳೆಯಾಗಲಿಲ್ಲ. ಕೊನೆಗೆ ಅದನ್ನು ಇಂಗ್ಲೇಡಿನ ಬ್ಲಡ್ ಗ್ರೂಪ್ ರೆಫರೆನ್ಸ್ ಲ್ಯಾಬೋರೇಟರಿಗೆ ಕಳುಹಿಸಲಾಯಿತು. ಅಲ್ಲಿ ಇದು ತೀರಾ ಅಪರೂಪದ ರಕ್ತದ ಗುಂಪು ಎಂದು ಖಚಿತಪಡಿಸಲಾಯಿತು.

click me!