
ಮಸಾಜ್ ಮಾಡಿ: ಆಲಿವ್ ಅಥವಾ ಕೊಬ್ಬರಿ ಎಣ್ಣೆಯಿಂದ ಮಕ್ಕಳ ದೇಹವನ್ನು ಚೆನ್ನಾಗಿ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು, ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿಸಿ. ನೀರು ಹೆಚ್ಚು ಬಿಸಿಯಿದ್ದರೆ, ಚರ್ಮಕ್ಕೆ ತೊಂದರೆಯಾಗಬಹುದು.
ಕೈ ತೊಳೆಸಿ: ಚಳಿಗಾಲದಲ್ಲಿ ವೈರಸ್‌ಗಳ ಕಾಟ ಹೆಚ್ಚು. ಮಕ್ಕಳಿಗೆ ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುವಂತೆ ಹೇಳಿ. ನೀವೂ ಅದನ್ನೇ ಮಾಡಿ. ಪುಟ್ಟಮಕ್ಕಳಿದ್ದರೆ, ಅವರನ್ನು ಹೊರಗೆಲ್ಲ ಕರೆದೊಯ್ಯದೆ, ಆದಷ್ಟುಮನೆಯೊಳಗೇ ಇರಿಸಿಕೊಳ್ಳಿ.
ಬಿಸಿಯಾದದ್ದನ್ನು ಕೊಡಿ: ಮಕ್ಕಳಿಗೆ ಯಾವುದೇ ಕಾರಣಕ್ಕೂ ಫ್ರಿಜ್‌ನಲ್ಲಿಟ್ಟತಣ್ಣಗಿನ ನೀರು ಕೊಡಬೇಡಿ. ಕುದಿಸಿ, ಆರಿಸಿದ ನೀರನ್ನೇ ಕುಡಿಸಿ. ಬಿಸಿ-ಬಿಸಿಯಾದ ಆಹಾರ ಪದಾರ್ಥಗಳನ್ನು ತಯಾರಿಸಿ, ಉಣಿಸಿ.
ದೇಹ ಕವರ್ ಮಾಡಿ: ಮಕ್ಕಳ ಕೈಗಳು, ಕುತ್ತಿಗೆ, ತಲೆಯ ಭಾಗ ಮುಚ್ಚುವಂತೆ ದಪ್ಪನೆಯ ಗ್ಲೌಸ್, ಮಂಕಿ ಕ್ಯಾಪ್ ಹಾಗೂ ಸ್ವೆಟರ್ ಅನ್ನು ಧರಿಸಿ. ಅವರು ಬೆಚ್ಚಗಿರುವಂತೆ ನೋಡಿಕೊಳ್ಳಿ. ರಾತ್ರಿ ಮಲಗುವಾಗ ಹೊದಿಸುವ ಹೊದಿಕೆಯೂ ದಪ್ಪವಿರಲಿ.
ಲೋಷನ್ ಬಳಸಿ: ಚಳಿಗಾಲದಲ್ಲಿ ಚರ್ಮವು ಒಣಗಿದಂತಾಗಿ, ಪಾದಗಳ ಹಿಂಭಾಗ ಸೀಳಿದಂತಾಗುವ ಸಮಸ್ಯೆ ಎದುರಾಗುತ್ತದೆ. ಸೂಕ್ತ ಸನ್‌ಸ್ಕ್ರೀನ್ ಅಥವಾ ಇನ್ನಿತರ ಲೋಷನ್‌ಗಳನ್ನು ಹಚ್ಚಿ ಮಕ್ಕಳ ಚರ್ಮವನ್ನು ಸಂರಕ್ಷಿಸಿಕೊಳ್ಳಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.