
ನವದೆಹಲಿ(ನ.16): ದೇಶದಿಂದ ಪಲಾಯನಗೊಂಡಿರುವ ಉದ್ದೇಶಪೂರ್ವಕ ಸುಸ್ತೀದಾರ ವಿಜಯ್ ಮಲ್ಯ ಅವರ ಸಾಲವನ್ನು ಎಸ್'ಬಿಐ ಮನ್ನಾ ಮಾಡಿತಾ ಇಂತಹದೊಂದು ಪ್ರಶ್ನೆ ಈಗ ಎಲ್ಲಡೆ ಚರ್ಚೆಯಾಗುತ್ತಿದೆ. ತಾನು ಸಾಲವನ್ನು ಮನ್ನಾ ಮಾಡಿಲ್ಲ ಎಂಬುದಕ್ಕೆ ಸ್ಪಷ್ಟಿಕರಣ ನೀಡಿರುವ ಎಸ್'ಬಿಐ ನಾವು ಮಲ್ಯ ಅವರ ಸಾಲವನ್ನು ಮನ್ನಾ ಮಾಡಿಲ್ಲ. ಅವರ ಮುಚ್ಚಿಹೋಗಿರುವ ಕಿಂಗ್‌ಫಿಶರ್ ಏರ್‌ಲೈನ್ಸ್ ಗೆ ನೀಡಿದ್ದ 7000ಕೋಟಿ ರೂ.ಗಳ ಸಾಲವನ್ನು ರೈಟ್ ಆಫ್ ಮಾಡಿದ್ದೇವೆ. 1,200 ಕೋಟಿ ರೂ.ಗಳ ಮರಳಿ ಬಾರದ ಸಾಲವನ್ನು "ಅಡ್‌ವಾನ್ಸ್ ಅಂಡರ್ ಕಲೆಕ್ಷನ್ ಅಕೌಂಟ್ಸ್' (ಎಯುಸಿಎ) ವರ್ಗಕ್ಕೆ ವರ್ಗಾಯಿಸಲಾಗಿದೆ ಮತ್ತು ಆ ಮೂಲಕ ಈ ಸುಸ್ತಿ ಸಾಲವನ್ನು ಭವಿಷ್ಯದಲ್ಲಿ ವಸೂಲಿ ಮಾಡುವ ಅವಕಾಶವನ್ನು ಮುಕ್ತವಾಗಿರಿಸಲಾಗಿದೆ ಎಂದು ಎಸ್‌ಬಿಐ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.