ಜಿಯೋ ಫೋನ್ ಬುಕಿಂಗ್ ನಾಳೆಯಿಂದ ಆರಂಭ

By Suvarna Web DeskFirst Published Aug 23, 2017, 12:01 PM IST
Highlights

ವಾಣಿಜ್ಯೋದ್ಯಮ ಗ್ರಾಹಕರು ಸಹ ತಮ್ಮ ಜಿಎಸ್'ಟಿಎನ್ ಅಥವಾ ಪಾನ್‌'ಕಾರ್ಡ್ ಬಳಸಿ ರಿಲಯನ್ಸ್ ಜಿಯೋಫೋನ್ ಬುಕ್ ಮಾಡಬಹುದಾಗಿದೆ.

ಮುಂಬೈ(ಆ.23): ರಿಲಯನ್ಸ್ ಜಿಯೋದ 1500 ರು. ಮೊತ್ತದ ಮೊಬೈಲ್‌'ಗೆ ಗುರುವಾರದಿಂದ ಮುಂಗಡ ಬುಕಿಂಗ್ ಆರಂಭವಾಗಲಿದೆ.ಕಾಯ್ದಿರಿಸಿದ ಮೊಬೈಲ್‌'ಗಳು ಸೆಪ್ಟೆಂಬರ್ ವೇಳೆಗೆ ಗ್ರಾಹಕರಿಗೆ ಲಭ್ಯವಾಗಲಿವೆ.

ಫೋನ್‌'ಬುಕ್ ಮಾಡಲು ಜಿಯೋ.ಕಾಮ್ ವೆಬ್‌'ಸೈಟ್‌'ಗೆ ಭೇಟಿ ನೀಡಿ ಜಿಯೋ ಫೋನ್ ಬ್ಯಾನರ್ ಇರುವ ಕೀಪ್ ಮಿ ಪೋಸ್ಟೆಡ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆ ಬಳಿಕ ನಿಮ್ಮ ಮಾಹಿತಿ ಅಂದರೆ, ಹೆಸರು, ಇ-ಮೇಲ್ ಐಡಿ, ಮೊಬೈಲ್ ನಂಬರ್, ಹಾಗೂ ಪಿನ್ ಕೋಡ್. ಆನಂತರ ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಬೇಕು. ಫಾರ್ಮ್ ಸಬ್'ಮೀಟ್ ಮಾಡಿದ ಬಳಿಕ ಜಿಯೋ ಕಂಪನಿಯಿಂದ ಸಂದೇಶ ಬರುತ್ತದೆ.

Latest Videos

ಅಲ್ಲದೆ, ಸ್ಥಳೀಯ ಜಿಯೋ ಸ್ಟೋರ್‌'ನಲ್ಲೂ ಜಿಯೋ ಫೋನ್ ಕಾಯ್ದಿರಿಸಬಹುದಾಗಿದೆ. ವಾಣಿಜ್ಯೋದ್ಯಮ ಗ್ರಾಹಕರು ಸಹ ತಮ್ಮ ಜಿಎಸ್'ಟಿಎನ್ ಅಥವಾ ಪಾನ್‌'ಕಾರ್ಡ್ ಬಳಸಿ ರಿಲಯನ್ಸ್ ಜಿಯೋಫೋನ್ ಬುಕ್ ಮಾಡಬಹುದಾಗಿದೆ.

click me!