
ಕೊಚ್ಚಿ(ಜು.01): ಜಗತ್ತಿನ ಕುಖ್ಯಾತ ಉಗ್ರ ಸಂಘಟನೆಗಳಲ್ಲಿ ಒಂದಾಗಿರುವ ಐಸಿಸಿ ಸೇರಲು ಸಜ್ಜಾಗಿದ್ದ 350 ಮಂದಿ ವಿದ್ಯಾವಂತ ಯುವಕರನ್ನು ಮನವೊಲಿಸಲು ಕೇರಳ ಪೊಳಿಸರು ಸದ್ದಿಲ್ಲದೆ ಹಮ್ಮಿಕೊಂಡಿದ್ದ 'ಆಪರೇಷನ್ ಪಾರಿವಾಳ' ಭರ್ಜರಿ ಯಶಸ್ಸು ಕಂಡಿದೆ.
ಐಸಿಸಿ'ನತ್ತ ಆಕರ್ಷಿತರಾಗಿರುವ ಯುವಕರನ್ನು ಕೌನ್ಸಲಿಂಗ್ ಮೂಲಕ ಮನವೊಲಿಸಿ ಅವರಿಗೆ ಬುದ್ಧಿ ಹೇಳುವುದೇ ಆಪರೇಷನ್ ಪಾರಿವಾಳ. ಕರ್ನಾಟಕದ ಗಡಿಯಲ್ಲಿರುವ ಕಾಸರಗೋಡುವಿನಲ್ಲಿರುವ ಆರಂಭವಾದ ಈ ಕಾರ್ಯಕ್ರಮ ಈಗ ರಾಜ್ಯದಾದ್ಯಂತ ವಿಸ್ತರಣೆಯಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಐಸಿಸ್ ಸಿದ್ಧಾಂತದ ಬಗ್ಗೆ ಆಕರ್ಷಿತರಾಗಿರುವ 350 ಮಂದಿಯನ್ನು ಗುರುತಿಸಿ ಅವರನ್ನು ಮನವೊಲಿಸಲಾಗಿದೆ. ಪೋಷಕರ ನೆರವಿನಿಂದ ಮನವೊಲಿಕೆ ಕಾರ್ಯಕ್ರಮ ನಡೆದಿದೆ.
ಕಣ್ಣೂರು ಜಿಲ್ಲೆಯೊಂದರಲ್ಲೇ 118 ಮಂದಿ ಇಂತಹ ಯುವಕರು ಸಿಕ್ಕಿದ್ದಾರೆ.ಮಲಪುರಂ'ನಲ್ಲಿ 89 ಹಾಗೂ ಕಾಸರಗೋಡುನಲ್ಲಿ 66 ಮಂದಿ ಪತ್ತೆಯಾಗಿದ್ದು,ಅವರ ಮನವೊಲಿಕೆ ನಡೆಸಲಾಗಿದೆ. ಇವರೆಲ್ಲಾ 20ರ ಆಜುಬಾಜಿನವರಾಗಿದ್ದು, ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಪದವಿ ಪಡೆಯುತ್ತಿದ್ದಾರೆ. ತಾವು ಹೋಗುತ್ತಿರುವ ಹಾದಿ ಸುಲಭವಲ್ಲ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. 30 ಮಂದಿ ಮಾತ್ರ ಐಸಿಸ್'ನತ್ತ ಒಲವು ಹೊಂದಿದ್ದು, ಅವರ ಮನವೊಲಿಕೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.