ರಾಜ್ಯ ವಿಧಾನಸಭೆಯಲ್ಲಿ ಸರಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್ ನಂಬರ್ 112. ಆದರೆ, ಬದಲಾದ ರಾಜಕೀಯ ಸ್ಥಿತಿಯಲ್ಲಿ ಈ ಮ್ಯಾಜಿಕ್ ನಂಬರ್ 103ಕ್ಕೆ ಇಳಿದಿದೆ. 105 ಶಾಸಕರಿರುವ ಬಿಜೆಪಿ ಸರಕಾರ ರಚಿಸಲು ಸನ್ನದ್ಧವಾಗಿದೆ. ಆದರೆ, ಇದು ಸಂವಿಧಾನ ವಿರೋಧಿ ಎನ್ನುತ್ತಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.
ಬೆಂಗಳೂರು (ಜು.26): ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿದ ಬೆನ್ನಲ್ಲೇ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದಿರುವ ಬಿಜೆಪಿ ಸರಕಾರ ರಚಿಸಲು ಸಿದ್ಧವಾಗಿದೆ.
ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಸಿದ್ಧವಾಗಿದೆ. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ್ತೆ ಸರ್ಕಾರ ರಚನೆಯ ಅವಕಾಶ?
ಬಹುಮತವಿಲ್ಲದಿದದ್ದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಬಿಎಸ್‌ವೈ ಅವರ ತರಾತುರಿಯ ನಿರ್ಧಾರವನ್ನು ರಾಜ್ಯಪಾಲರು ಒಪ್ಪಿರುವುದು ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಬೆಳವಣಿಗೆ. ಸಂವಿಧಾನದ ಮೇಲೆ ರಾಷ್ಟೀಯ ಬಿಜೆಪಿ ನಾಯಕರಿಗೆ ನಂಬಿಕೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ,' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಬಹುಮತ ಇಲ್ಲದೆ ಇದ್ದರೂ ಮುಖ್ಯಮಂತ್ರಿಯಾಗಲು ಹೊರಟಿರುವುದು ಮತ್ತು
ಅವರ ತರಾತುರಿಯ ನಿರ್ಧಾರವನ್ನು ರಾಜ್ಯಪಾಲರು ಒಪ್ಪಿರುವುದು-
ಎರಡೂ ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಬೆಳವಣಿಗೆಗಳು.
ಸಂವಿಧಾನದ ಮೇಲೆ ಗೆ
ನಂಬಿಕೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಸಿದ್ದು ಟ್ವೀಟ್‌ಗೆ ಸೋಮಣ್ಣ ಪ್ರತಿಕ್ರಿಯೆ:
ಸಿದ್ದರಾಮಯ್ಯ ಮಾಡಿರುವ ಟ್ವೀಟಿಗೆ ಮಾಜಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದು, 'ನಾಟಕವೇನು ಎನ್ನುವುದು ರಾಷ್ಟ್ರದ ಜನರು ನೋಡುತ್ತಿದ್ದಾರೆ. ನಾಯಕನಾಗಿರಬೇಕಾದರೆ ಇನ್ನು ಮುಂದೆಯಾದರೂ ಗೌರವಯುತವಾಗಿ ನಡೆದುಕೊಳ್ಳೋದು ಒಳ್ಳೆಯದು. ಇವೆಲ್ಲ ಬಿಡಬೇಕು . ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿದ್ದವರು. ಯಾರೋ ರೋಡಲ್ಲಿ ಹೋಗೋರು ಮಾತಾಡ್ತಾರಂತ ಅವರು ಹಾಗೆ ಮಾತಾಡಬಾರದು . ಬಹುಮತ ಇದ್ದರೂ ಸರ್ಕಾರ ಹೋಯಿತಾ..? ಬಿಜೆಪಿಗೆ ಬಹುಮತ ಇರೋದಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ಕೊಟ್ಟಿರುವುದು. 14 ತಿಂಗಳು ರಾಜ್ಯ ಕತ್ತಲೆ ಕೋಣೆಯಲ್ಲಿತ್ತು. ಇನ್ನು ಮುಂದೆಯಾದರೂ ಕೆಲಸ ಮಾಡುವುದಕ್ಕೆ ಅನುವು ಮಾಡಿಕೊಡಲಿ ,' ಎಂದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
'ಮಾಹಿತಿ ಪ್ರಕಾರ ಅವರೊಬ್ಬ ಪ್ರಮಾಣ ವಚನ ಸ್ವೀಕರಿಸುತ್ತಾರೆ . ಸೋಮವಾರ ಬಹುಮತ ಸಾಬೀತು ಪಡಿಸುತ್ತೇವೆ. ನಂತರ ಸಚಿವರು ಯಾರೂ ಪ್ರಮಾಣ ವಚನ ಸ್ವೀಕರಿಸಬೇಕೆನ್ನುವುದು ಯಡಿಯೂರಪ್ಪ ವಿವೇಚನೆಗೆ ಬಿಟ್ಟಿದ್ದು,' ಎಂದು ಸ್ಪಷ್ಟಪಡಿಸಿದ್ದಾರೆ.