
ಬೆಂಗಳೂರು(ನ.18): ಕಪ್ಪು ಹಣವನ್ನು ಬದಲಾಯಿಸಿಕೊಳ್ಳಲು ಬೆಂಗಳೂರಿನ ಪ್ರತಿಷ್ಠಿತ ಹೋಟೆಲೊಂದು ತನ್ನ ಗ್ರಾಹಕರಿಗೆ ಹಳೇ ದಿನಾಂಕದ ಬಿಲ್ ನೀಡುತ್ತಿದ್ದು, ಅಲ್ಲದೇ ಗ್ರಾಹಕರಿಂದ ಕಾರ್ಡ್ ರೂಪದಲ್ಲಿ ಹಣವನ್ನು ಸ್ವೀಕರಿಸಲು ನಿರಾಕರಿಸುತ್ತಿದೆ ಎಂದು ಗ್ರಾಹಕರೊಬ್ಬರು ಸಾಕ್ಷಿ ಸಮೇತ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ.
ತಮ್ಮ ಹೋಟೆಲಿಗೆ ಬರುವ ಗ್ರಾಹಕರಿಗೆ 1000 ಮತ್ತು 500ರೂ ರ ನೋಟುಗಳನ್ನು ನಿಷೇಧಗೊಳಿಸಿದ ದಿನಾಂಕದಿಂದ ಒಂದು ತಿಂಗಳ ಹಿಂದಿನ ಬಿಲ್ ನೀಡುತ್ತಿರುವ ಬೆಂಗಳೂರು ನಗರದಲ್ಲಿ 20ಕ್ಕೂ ಬ್ರಾಂಚ್ ಗಳನ್ನು ಹೊಂದಿರುವ ಈ ಹೋಟೆಲ್ ಮಾಲೀಕರು ತಮ್ಮ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳು ಈ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.
ಇದೇ ಭಾನುವಾರ ಚರ್ಚ್ ಸ್ಟ್ರೀಟ್ ನಲ್ಲಿರುವ ಹೋಟೆಲಿಗೆ ಹೋದ ಮೀಧುನ್ ನೋಬ್ಲೆ ಎಂಬುವವರಿಂದ ಕಾರ್ಡ್ ನಲ್ಲಿ ಹಣ ಪಾವತಿ ಮಾಡುವ ಅವಕಾಶವನ್ನು ನೀಡದ ಹೋಟೆಲ್ ಮಂದಿ, ನಗದು ಮೂಲಕವೇ ಪಾವತಿ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಅದರೊಂದಿಗೆ ಅವರು 01-09-2016ರ ದಿನಾಂಕಕ್ಕೆ ಬಿಲ್ ನೀಡಿದ್ದಾರೆ. ಆದರೆ ಹಣ ಪಾವತಿ ಮಾಡುವ ಸಂದರ್ಭದಲ್ಲಿ ಇದನ್ನು ನೋಡದ ಅವರು ಮನೆಗೆ ಬಂದು ನೋಡಿದ ಸಂದರ್ಭದಲ್ಲಿ ತಾವು ಮೋಸ ಹೊಗಿರುವುದನ್ನು ತಿಳಿದಿದ್ದಾರೆ.
ತಮಗೆ ಆದ ಮೋಸ ಮತ್ತೊಬ್ಬರಿಗೆ ಆಗಬಾರದು ಎನ್ನುವ ಕಾರಣಕ್ಕೆ ತಮಗಾದ ಅನುಭವನ್ನು ಫೇಸ್ ಬುಕ್ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಹೋಟೆಲ್ ಮಂದಿಯ ಬಣ್ಣ ಬಯಲು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.